ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿದೆ ಅನ್ನೋ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಸಾನಿಯಾ ಮತ್ತು ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲಿಕ್ ವಿಚ್ಛೇದನ ಪಡೆಯಲಿದ್ದಾರೆ ಎಂಬ ವದಂತಿಗಳೂ ಕೇಳಿಬರುತ್ತಿವೆ. ಇಬ್ಬರ ಮಧ್ಯೆ ವೈಮನಸ್ಸು ಶುರುವಾಗಿ ಬಹಳ ದಿನಗಳಾಗಿದ್ದು, ಬೇರೆ ಬೇರೆಯಾಗಿಯೇ ವಾಸಿಸುತ್ತಿದ್ದಾರಂತೆ. ಆದರೆ ಸಾನಿಯಾ ಅಥವಾ ಶೋಯೆಬ್ ಈ ಬಗ್ಗೆ ಸ್ಪಷ್ಟನೆ ನೀಡಿಲ್ಲ.
ಈ ಮಧ್ಯೆ ಸಾನಿಯಾ ಮಿರ್ಜಾರ ಮದುವೆಗೂ ಮೊದಲಿನ ಅಫೇರ್, ಲವ್ ಲೈಫ್ ಬಗ್ಗೆಯೂ ಚರ್ಚೆಗಳು ಶುರುವಾಗಿವೆ. ಸಾನಿಯಾ ಮತ್ತು ಶೋಯೆಬ್ 2010ರಲ್ಲಿ ಹೈದರಾಬಾದ್ನಲ್ಲಿ ಮದುವೆಯಾಗಿದ್ದರು. 2018ರಲ್ಲಿ ಸಾನಿಯಾ ಗಂಡು ಮಗುವಿನ ತಾಯಿಯಾಗಿದ್ದಾರೆ. ದಂಪತಿಗೆ 4 ವರ್ಷದ ಮಗನಿದ್ದಾನೆ. ಸಾನಿಯಾ ಸದ್ಯ ದುಬೈನಲ್ಲಿ ನೆಲೆಸಿದ್ದಾರೆ. ಆದ್ರೆ ಶೋಯೆಬ್ ಮಲಿಕ್ ಪಾಕಿಸ್ತಾನದಲ್ಲಿದ್ದಾರಂತೆ.
ಶೋಯೆಬ್ ಮಲಿಕ್ ಜೊತೆಗಿನ ವಿವಾಹಕ್ಕೂ ಮುನ್ನ ಬಾಲಿವುಡ್ ನಟರೊಬ್ಬರ ಜೊತೆಗೆ ಸಾನಿಯಾ ಹೆಸರು ಕೇಳಿ ಬಂದಿತ್ತು. ಸಾನಿಯಾ ಹಾಗೂ ನಟ ಶಾಹಿದ್ ಕಪೂರ್ ಡೇಟಿಂಗ್ನಲ್ಲಿದ್ದರಂತೆ. ಕಾಫಿ ವಿತ್ ಕರಣ್ನಲ್ಲಿ ಈ ವಿಚಾರ ಬೆಳಕಿಗೆ ಬಂದಿತ್ತು. ಆದ್ರೆ ಇದು ಕೇವಲ ವದಂತಿ ಅಂತಾ ಖುದ್ದು ಸಾನಿಯಾ ಸ್ಪಷ್ಟಪಡಿಸಿದ್ದರು. ಯಾವುದೇ ಚಿತ್ರನಟರೊಂದಿಗೆ ನನಗೆ ಸಂಪರ್ಕವಿರಲಿಲ್ಲ ಅಂತಾ ಖುದ್ದು ಸಾನಿಯಾ ಸ್ಪಷ್ಟಪಡಿಸಿದ್ದಾರೆ. ಶಾಹಿದ್ ಕಪೂರ್ಗೆ ಕೂಡ ಮದುವೆಯಾಗಿದ್ದು, ಇಬ್ಬರು ಮಕ್ಕಳ ತಂದೆಯಾಗಿದ್ದಾರೆ. ಹಾಗಾಗಿ ಹಳೆಯ ಪ್ರೇಮ ಪ್ರಸಂಗಗಳೆಲ್ಲವೂ ಈಗ ಇತಿಹಾಸ.