ಮದುವೆ ಸಮಾರಂಭ ಅಂದ್ರೆ, ಅಲ್ಲಿ ಮೋಜು ಮಸ್ತಿ ಇದ್ದೇ ಇರುತ್ತೆ. ಹೊಸ ಜೀವನಕ್ಕೆ ಕಾಲಿಡುತ್ತಿರುವ ನವದಂಪತಿಗಳಿಗೆ ಹೊಸ ಹೊಸ ಆಸೆ, ಕನಸು. ಜೀವನದಲ್ಲಿ ಒಮ್ಮೆ ಬರುವ ಈ ದಿನವನ್ನ, ಇನ್ನಷ್ಟು ಕಲರ್ ಫುಲ್ ಆಗಿ ಮಾಡೋದಕ್ಕೆ, ಮದುಮಗ, ಮದುಮಗಳು ಏನಾದರೊಂದು ಪ್ಲಾನ್ ಮಾಡಿರ್ತಾರೆ. ಅದು ಇತ್ತೀಚೆಗೆ ಟ್ರೆಂಡ್ ಕೂಡಾ ಆಗಿದೆ. ಅಂತಹದ್ದೇ ಒಂದು ವಿಡಿಯೋ ಒಂದು ಈಗ ವೈರಲ್ ಆಗಿದೆ. ಇಲ್ಲಿ ಮದುಮಗಳು ತನ್ನ ಹುಡುಗನಿಗಾಗಿಯೇ ಗೆಳತಿಯರ ಜೊತೆ ಸೇರಿ ಸ್ಪೆಷಲ್ ಡಾನ್ಸ್ ಒಂದನ್ನ ಮಾಡುತ್ತಾಳೆ.
ಇದು ಮದುವೆ ಸೀಜನ್, ಮದುವೆ ಮನೆಯಲ್ಲಿ ನಡೆಯುವ ವಿಶೇಷ ಘಳಿಗೆಯನ್ನ ಮೊಬೈಲ್ ಇಲ್ಲಾ ಕ್ಯಾಮರಾಗಳಲ್ಲಿ ರಿಕಾರ್ಡ್ ಮಾಡಿಕೊಳ್ತಾರೆ. ಕೊನೆಗೆ ಅಂತಹ ಸ್ಪೆಷಲ್ ವಿಡಿಯೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡ್ತಾರೆ. ಅಂತಹದ್ದೇ ಒಂದು ಸ್ಪೆಷಲ್ ವಿಡಿಯೋ ಇದಾಗಿದೆ. ಇಲ್ಲಿ ಮದುಮಗಳು ಬಾಲಿವುಡ್ನ ಹಿಟ್ ಹಾಡು, ಕತ್ರೀನಾ ಕೈಫ್ ಬಿಂದಾಸ್ ಆಗಿ ಸ್ಟೆಪ್ ಹಾಕಿರೋ ‘ಚಿಕನಿ ಚಮೇಲಿ’ ಹಾಡಿಗೆ ಸ್ಟೆಪ್ ಹಾಕಿದ್ದಾಳೆ ಮದುಮಗಳು. ಈ ಹಾಡಿನ ನಂತರ ‘ಶರಾರಾ…..ಶರಾರಾ…..‘ ಹಾಡಿಗೂ ಎಲ್ಲರೂ ಸೇರಿ ಡಾನ್ಸ್ ಮಾಡಿದ್ದಾರೆ. ಇವರು ಮಾಡಿದ್ದ ಡಾನ್ಸ್ ನೋಡಿ ಮದುವೆ ಮನೆಗೆ ಬಂದ ಅತಿಥಿಗಳೆಲ್ಲ ಫುಲ್ ಫಿದಾ ಆಗಿ ಹೋಗಿದ್ದಾರೆ. ವಧು ಈ ಡಾನ್ಸ್ ನ ಕೇಂದ್ರಬಿಂದುವಾಗಿದ್ದು, ಎಲ್ಲರ ದೃಷ್ಟಿ ತಾಕುವ ಹಾಗೆ ಡಾನ್ಸ್ ಮಾಡಿ ಎಲ್ಲರ ಮನಸ್ಸನ್ನ ಗೆದ್ದಿದ್ದಳು.
ವಧು ಅನಿಶಾ ತಮ್ಮ ಈ ವಿಡಿಯೋವನ್ನ ಇಂಸ್ಟಾಗ್ರಾಮ್ಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಇವರು ಲಾಸ್ ಎಂಜಿಲ್ಸ್ನಲ್ಲಿ ಡಾನ್ಸರ್ ಹಾಗೂ ಅರ್ಥೊಡಾಟ್ನಿಸ್ಟ್ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರೋ ಈ ವಿಡಿಯೋ ಕ್ಯಾಪ್ಷನ್ನಲ್ಲಿ ಅವರು‘ ನೀವೇನಾದರೂ ನನ್ನ ತಂದೆ ಒಳ್ಳೆಯವರಾಗಿದ್ದರು ಅಂತ ಅಂದ್ಕೊಂಡಿದ್ರೆ, ಹಾಗಾದ್ರೆ ಒಮ್ಮೆ ನನ್ನ ಗೆಳೆಯರನ್ನ ನೋಡುವ ತನಕ ನೀವು ಕಾಯಬೇಕು ’ ಅಂತ ಬರೆದುಕೊಂಡಿದ್ದಾರೆ. ಅದಕ್ಕೂ ಮುಂಚೆ ಅನಿಶಾ ಇನ್ನೂ ಒಂದಷ್ಟು ವಿಡಿಯೋಗಳನ್ನ ಅಪ್ಲೋಡ್ ಮಾಡಿದ್ದಾರೆ. ಅದರಲ್ಲಿ ಬಾಲಿವುಡ್ನ ಫೇಮಸ್ ಐಟಂ ಸಾಂಗ್ ಡಾನ್ಸರ್ ಆಗಿರೋ ನೋರಾ ಫತೆಹೀ ಇವರ ಫೇಮಸ್ ಹಾಡು ‘ಸಾಕಿ ಸಾಕಿ‘ ಹಾಡಿಗೆ ಆಕೆಯ ತಂದೆ ಡಾನ್ಸ್ ಮಾಡ್ತಿರೋ ವಿಡಿಯೋ.
ಈಗಾಗಲೇ ವೈರಲ್ ಆಗಿರೋ ಈ ವಿಡಿಯೋವನ್ನ ಸಾವಿರಾರು ಜನರು ವೀಕ್ಷಿಸಿ, ಇಷ್ಟ ಪಟ್ಟಿದ್ದಾರೆ. ಕೆಲವರಂತೂ ಯಾವುದೇ ಸಿನೆಮಾಗಿಂತಲೂ ಈ ಡಾನ್ಸ್ ಕಡಿಮೆ ಇಲ್ಲ ಅಂತಾನೂ ಹೇಳಿದ್ದಾರೆ.
https://youtu.be/igxidRRDqSk