ಪೇಡಾ ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಸಿಹಿ ಪ್ರಿಯರಿಗಂತೂ ಇದು ತುಂಬಾನೇ ಇಷ್ಟ. ಇಲ್ಲಿ ರುಚಿಕರವಾದ ಮಥುರಾ ಪೇಡಾ ತಯಾರಿಸುವ ವಿಧಾನ ಇದೆ. ಮಾಡಿ ಸವಿದು ನೋಡಿ.
ಬೇಕಾಗುವ ಸಾಮಗ್ರಿಗಳು:
ಖೋವಾ – 2 ಕಪ್, ಸಕ್ಕರೆ – 1/2 ಕಪ್, ಏಲಕ್ಕಿ ಪುಡಿ – 1 ಟೀ ಸ್ಪೂನ್, ಹಾಲು – 1 ಟೇಬಲ್ ಸ್ಪೂನ್.
ಮಾಡುವ ವಿಧಾನ:
ಖೋವಾ ಅನ್ನು ಮೊದಲು ತುರಿದುಕೊಳ್ಳಿ. ನಂತರ ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ತುರಿದ ಖೋವಾ ಹಾಕಿ ಹೊಂಬಣ್ಣ ಬರುವವರೆಗೆ ಹುರಿಯಿರಿ. ನಂತರ ಇದನ್ನು ಬ್ಲೆಂಡರ್ ಗೆ ಹಾಕಿ ಅದಕ್ಕೆ ಸಕ್ಕರೆ ಸೇರಿಸಿ, ಏಲಕ್ಕಿ ಪುಡಿ ಸೇರಿಸಿ 1 ನಿಮಿಷಗಳ ಕಾಲ ಮಿಕ್ಸಿ ಮಾಡಿಕೊಳ್ಳಿ.
ನಂತರ ಇದಕ್ಕೆ ಸ್ವಲ್ಪ ಹಾಲನ್ನು ಚಿಮುಕಿಸಿಕೊಂಡು ಮತ್ತೊಮ್ಮೆ ಮಿಕ್ಸಿ ಮಾಡಿಕೊಂಡು ಒಂದು ಬೌಲ್ ಗೆ ತೆಗೆದುಕೊಳ್ಳಿ. ಸ್ವಲ್ಪ ಸ್ವಲ್ಪವೇ ತೆಗೆದುಕೊಂಡು ಉಂಡೆ ಕಟ್ಟಿ ಸಕ್ಕರೆಯಲ್ಲಿ ಹೊರಳಾಡಿಸಿದರೆ ರುಚಿಕರವಾದ ಮಥುರಾ ಪೇಡಾ ಸವಿಯಲು ಸಿದ್ಧ.