ಚುನಾವಣೆಯಲ್ಲಿ ಮತದಾನ ಹೆಚ್ಚಳಕ್ಕೆ ಕೇಂದ್ರ ಚುನಾವಣಾ ಆಯೋಗ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಮತದಾನ ಮಾಡಲು ಸೆಲೆಬ್ರಿಟಿಗಳಿಂದ ಸಂದೇಶ ನೀಡಿಸುವುದರ ಜೊತೆಗೆ ವಿವಿಧ ರೀತಿಯಲ್ಲಿ ಪ್ರಚಾರ ಕಾರ್ಯ ಕೈಗೊಳ್ಳಲಾಗುತ್ತಿದೆ.
ಇವರ ಮಧ್ಯೆ ಕೊಡಗು ಜಿಲ್ಲಾ ಹೋಟೆಲ್, ರೆಸಾರ್ಟ್ಸ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್ ಮಹತ್ವದ ತೀರ್ಮಾನ ಒಂದನ್ನು ಕೈಗೊಂಡಿದೆ. ಮೇ 10ರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಿ ಬಂದವರಿಗೆ ಶೇಕಡ 10 ರಷ್ಟು ರಿಯಾಯಿತಿ ನೀಡಲು ನಿರ್ಧರಿಸಲಾಗಿದೆ.
ಮತದಾನ ದಿನದಂದು ಮತ ಚಲಾಯಿಸದೆ ಬರುವ ಕರ್ನಾಟಕದ ಮತದಾರರಿಗೆ ತಂಗಲು ಅವಕಾಶವಿಲ್ಲ ಎಂದು ಹೇಳಲಾಗಿದ್ದು, ಜೊತೆಗೆ ಮತದಾನ ಮಾಡಿ ಬಂದವರಿಗೆ ಶೇಕಡಾ 10ರಷ್ಟು ರಿಯಾಯಿತಿ ಸಿಗಲಿದೆ. ಕೊಡಗಿನಲ್ಲಿರುವ 300ಕ್ಕೂ ಅಧಿಕ ಹೋಟೆಲ್, ರೆಸಾರ್ಟ್ ಗಳಲ್ಲಿ ಈ ರಿಯಾಯಿತಿ ಲಭ್ಯವಾಗಲಿದೆ.