ಫೇಸ್ಬುಕ್ ಒಡೆಯ ಮಾರ್ಕ್ ಜುಕರ್ಬರ್ಗ್ ಹೆಸರು ಚಿಕ್ಕ ಮಕ್ಕಳಿಗೂ ಗೊತ್ತಿದೆ. ಶ್ರೀಮಂತಿಕೆಯ ಜೊತೆಗೆ ಅಭಿಮಾನಿಗಳನ್ನೂ ಜುಕರ್ಬರ್ಗ್ ಸಂಪಾದಿಸಿದ್ದಾರೆ. ತಮ್ಮ ಯಶಸ್ಸಿಗೆ ಕಾರಣ ಪತ್ನಿ ಪ್ರಿಸ್ಸಿಲ್ಲಾ ಚಾನ್ ಅಂತಾ ಮುಕ್ತ ಕಂಠದಿಂದ ಹೊಗಳ್ತಾರೆ ಜುಕರ್ಬರ್ಗ್.
ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಜುಕರ್ಬರ್ಗ್, ಇದೀಗ ತಮ್ಮ ವೈಯಕ್ತಿಕ ಬದುಕಿಗೆ ಸಂಬಂಧಪಟ್ಟ ಬಿಗ್ ನ್ಯೂಸ್ ಒಂದನ್ನು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಪತ್ನಿ ಪ್ರಿಸ್ಸಿಲ್ಲಾ ಜೊತೆಗಿರುವ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ವಿಶೇಷ ಏನಂದ್ರೆ ಜುಕರ್ಬರ್ಗ್ ಮೂರನೇ ಬಾರಿಗೆ ತಂದೆಯಾಗ್ತಿದ್ದಾರಂತೆ.
ಈಗಾಗ್ಲೇ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಮುಂದಿನ ವರ್ಷ ಮ್ಯಾಕ್ಸ್ ಮತ್ತು ಆಗಸ್ಟ್ಗೆ ಸಹೋದರಿ ಬರ್ತಿದ್ದಾಳೆ ಅಂತಾ ಪತ್ನಿ ಮೂರನೇ ಬಾರಿಗೆ ಗರ್ಭಿಣಿಯಾಗಿರೋ ಸಿಹಿ ಸುದ್ದಿಯನ್ನ ಅವರು ಹಂಚಿಕೊಂಡಿದ್ದಾರೆ. ಮೂರನೇ ಮಗುವಿನ ನಿರೀಕ್ಷೆಯಲ್ಲಿರೋ ದಂಪತಿಗೆ ಅಭಿನಂದನೆಗಳು ಹರಿದು ಬಂದಿವೆ. ಈ ವಿಚಾರವನ್ನು ಜುಕರ್ಬರ್ಗ್ ಪೋಸ್ಟ್ ಮಾಡ್ತಿದ್ದಂತೆ ಸಾವಿರಾರು ಕಮೆಂಟ್ಗಳು ಬಂದಿವೆ.
ಮಾರ್ಕ್ ಜುಕರ್ಬರ್ಗ್ ಮತ್ತು ಪ್ರಿಸ್ಸಿಲ್ಲಾ ಚಾನ್ಗೆ ಮ್ಯಾಕ್ಸ್ ಮತ್ತು ಆಗಸ್ಟ್ ಎಂಬ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಮುಂದಿನ ವರ್ಷ ಈ ದಂಪತಿ ಮತ್ತೊಂದು ಹೆಣ್ಣು ಮಗುವನ್ನು ಸ್ವಾಗತಿಸಲಿದ್ದಾರೆ. ಫೇಸ್ಬುಕ್ ಅನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ಜುಕರ್ಬರ್ಗ್, ವಿಶ್ವದ ಅತ್ಯಂತ ಶ್ರೀಮಂತರ ಪೈಕಿ 20ನೇ ಸ್ಥಾನದಲ್ಲಿದ್ದಾರೆ.