ಟೀಂ ಇಂಡಿಯಾದ ಮಾಜಿ ನಾಯಕ ಹಾಗೂ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ, ದೊಡ್ಡ ಉದ್ಯಮಿಯೂ ಹೌದು. ವಿರಾಟ್ ಈಗಾಗ್ಲೇ ಹತ್ತಾರು ಸ್ಟಾರ್ಟಪ್ ಗಳಲ್ಲಿ ಕೈಜೋಡಿಸಿದ್ದಾರೆ. ಇದೀಕ ರೇಜ್ ಕಾಫಿ ಎಂಬ ಕಾಫಿ ಉತ್ಪನ್ನಗಳ ತಯಾರಿಕಾ ಕಂಪನಿಯಲ್ಲಿ ಕೊಹ್ಲಿ ಹಣ ಹೂಡಿಕೆ ಮಾಡಿದ್ದಾರೆ. ಅಷ್ಟೇ ಅಲ್ಲ ಅವರನ್ನೇ ರಾಯಭಾರಿಯಾಗಿಯೂ ಕಂಪನಿ ನೇಮಿಸಿದೆ.
ದೆಹಲಿ ಮೂಲದ ಕಂಪನಿ ಇದು. ಕೊಹ್ಲಿ ಎಷ್ಟು ಮೊತ್ತವನ್ನು ಹೂಡಿಕೆ ಮಾಡಿದ್ದಾರೆಂದು ಬಹಿರಂಗಪಡಿಸಿಲ್ಲ. ಆನ್ ಲೈನ್ ಹಾಗೂ ಆಫ್ ಲೈನ್ ಎರಡೂ ಕಡೆ ವಹಿವಾಟನ್ನು ವಿಸ್ತರಿಸುವ ನಿಟ್ಟಿನಲ್ಲಿ ವಿರಾಟ್ ಕೊಹ್ಲಿ ಅವರ ಸಹಕಾರ ಪಡೆದಿದೆ.
ಈ ಫಂಡಿಂಗ್ ಸಹಾಯದಿಂದ ಮತ್ತಷ್ಟು ವಿನೂತನ ಉತ್ಪನ್ನಗಳನ್ನು ಪರಿಚಯಿಸುವುದರ ಜೊತೆಗೆ ಆಡಳಿತ ಮಂಡಳಿಗೆ ಅನುಭವಸ್ಥರನ್ನು ನೇಮಕ ಮಾಡಿಕೊಳ್ಳೋದಾಗಿ ರೇಜ್ ಕಾಫಿ ಹೇಳಿದೆ.
ಆರೋಗ್ಯ, ವಿಮೆ, ಪ್ರವಾಸ ಸೇರಿದಂತೆ ಹಲವು ವಿಭಾಗಗಳ ಹತ್ತಾರು ಕಂಪನಿಗಳಲ್ಲಿ ಕೊಹ್ಲಿ ಹೂಡಿಕೆ ಮಾಡಿದ್ದಾರೆ. 2021ರಲ್ಲಿ ಕೊಹ್ಲಿ ಬ್ಲೂ ಟ್ರೈಬ್ ಕಂಪನಿಯಲ್ಲಿ ಹಣ ಹಾಕಿದ್ದರು. ಹೈಪರೈಸ್, ಡಿಜಿಟ್ ಸೇರಿದಂತೆ ಹಲವು ಕಂಪನಿಗಳಲ್ಲೂ ಕೊಹ್ಲಿ ಹೂಡಿಕೆ ಮಾಡಿದ್ದಾರೆ.
ಸ್ಪೋರ್ಟ್ ಕೊನ್ವೋ, ಯುನಿವರ್ಸಲ್ ಸ್ಪೋರ್ಟ್ಸ್ ಬಿಝ್, ಗಲಾಕ್ಟಸ್ ಫನ್ ವೇರ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್, ಡಿಜಿಟ್, ಚಿಸೆಲ್ ಫಿಟ್ನೆಸ್, ಹೈಪರೈಸ್ ಹಾಗೂ ಬ್ಲೂ ಟ್ರೈಬ್ ಇವಿಷ್ಟೂ ಕಂಪನಿಗಳಲ್ಲಿ ವಿರಾಟ್ ಭಾರೀ ಮೊತ್ತವನ್ನೇ ಹೂಡಿಕೆ ಮಾಡಿದ್ದಾರೆ ಅಂತಾ ಹೇಳಲಾಗ್ತಾ ಇದೆ.
ಸ್ಪೋರ್ಟ್ ಕಾನ್ವೊ, ಲಂಡನ್ ಮೂಲದ ಸೋಶಿಯಲ್ ಮೀಡಿಯಾ ಸ್ಟಾರ್ಟಪ್. ಆಟಗಾರರು ಮತ್ತು ಅವರ ಅಭಿಮಾನಿಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ಇದನ್ನು ಆಕರ್ಷಕವಾಗಿ ಅಭಿವೃದ್ಧಿಪಡಿಸಲಾಗಿದೆ. Digit ಕಮಲೇಶ್ ಗೋಯಲ್ ಸ್ಥಾಪಿಸಿದ ಪುಣೆ ಮೂಲದ ವಿಮಾ ಸ್ಟಾರ್ಟಪ್ ಆಗಿದೆ.