ಕಝಾಕಿಸ್ತಾನದ ಬಾಡಿಬಿಲ್ಡರ್ ತನ್ನ ಮೊದಲನೆಯ ಸೆಕ್ಸ್ ಡಾಲ್ ಮುರಿದುಹೋದ ತಿಂಗಳ ನಂತರ ಹನಿಮೂನ್‌ನಲ್ಲಿ ಹೊಸ ಡಾಲ್ ಹೆಂಡತಿಯನ್ನು ಪಡೆದಿದ್ದಾನೆ.
ಬಾಡಿಬಿಲ್ಡರ್ ಯೂರಿ ಟೊಲೊಚ್ಕೊ ಮತ್ತೆ ಪ್ರೀತಿಯಲ್ಲಿ ಬಿದ್ದಂತೆ ತೋರುತ್ತಿದೆ. ಯಾಕೆಂದ್ರೆ ಈ ಬಾರಿ ಅವರು ಲೂನಾ ಜೊತೆ ಹನಿಮೂನ್ ಗೆ ತೆರಳಿದ್ದಾರೆ. ಗೊಂಬೆಗಳೊಂದಿಗೆ ಹನಿಮೂನ್ ಮಾಡುತ್ತಿರುವ ಬಾಡಿಬಿಲ್ಡರ್, ಇತ್ತೀಚೆಗೆ ತನ್ನ ಎರಡನೇ ಸೆಕ್ಸ್ ಡಾಲ್ ಜೊತೆಗೆ ಒಂದು ವಾರ ಕಳೆದಿದ್ದಾರೆ.
36 ವರ್ಷದ ಯೂರಿ ತನ್ನ ಹೊಸ ಪ್ಲಾಸ್ಟಿಕ್ ಪ್ರೀತಿ ಲೂನಾ ಜೊತೆ ಮಧುಚಂದ್ರಕ್ಕೆ ಹಾರಿದ್ದಾರೆ. ಮೊದಲ ಪ್ಲಾಸ್ಟಿಕ್ ಪತ್ನಿ ಮಾರ್ಗೋ ಮುರಿದುಹೋದ ತಿಂಗಳುಗಳ ನಂತರ ಇದನ್ನು ಅವರು ಪಡೆದುಕೊಂಡಿದ್ದಾರೆ. ಕಳೆದ ವರ್ಷ ಪ್ಲಾಸ್ಟಿಕ್ ಗೊಂಬೆಯನ್ನು ಮದುವೆಯಾದ ನಂತರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೂರಿ ಭಾರಿ ಸುದ್ದಿಯಾಗಿದ್ದರು. ಇನ್ಸ್ಟಾಗ್ರಾಂನಲ್ಲಿ ತನ್ನ ಗೊಂಬೆ ಹೆಂಡತಿಯ ಜೊತೆಗಿನ ಫೋಟೋ, ವಿಡಿಯೋವನ್ನು ಅವರು ಹಂಚಿಕೊಂಡಿದ್ದಾರೆ.
ಪೋಸ್ಟರ್‌ಗೆ ಹಾಲಿನ ಅಭಿಷೇಕ ಮಾಡುವ ಬದಲು ಬಡ ಮಕ್ಕಳಿಗೆ ನೀಡಿ; ಅಭಿಮಾನಿಗಳಿಗೆ ಸಲ್ಮಾನ್ ಮನವಿ
ಕೆಲಸದ ನಿಮಿತ್ತ ಒಂದು ವಾರದವರೆಗೆ ಸೋಫಿಯಾದಲ್ಲಿ ಉಳಿದಿದ್ದ ಯೂರಿ ಅವರಿಗೆ, ಈ ಪ್ರವಾಸ ಬಹಳ ರೊಮ್ಯಾಂಟಿಕ್ ಆಗಿ ಇತ್ತಂತೆ. ಪರಸ್ಪರ ಸಮಯ ಕಳೆಯಲು ಇದು ಬಹಳ ಸಹಕಾರಿಯಾಗಿತ್ತು. ಹೀಗಾಗಿ ಕೆಲಸದ ನಿಮಿತ್ತ ಬಂದರೂ ತನಗೆ ಹನಿಮೂನ್ ಗೆ ಬಂದಂತಾಯಿತು ಎಂದು ದೇಹದಾರ್ಡ್ಯ ಪಟು ತಿಳಿಸಿದ್ದಾರೆ.
ಯೂರಿ ತನ್ನನ್ನು ತಾನು ಒಪೆರಾ ನಿರ್ದೇಶಕ, ಸಾರ್ವಜನಿಕ ಭಾಷಣಕಾರ ಮತ್ತು ಪ್ರದರ್ಶಕ ಎಂದು ಕರೆದುಕೊಳ್ಳುತ್ತಾನೆ. ತಮ್ಮ ಅಭಿಮಾನಿಗಳನ್ನು ಮತ್ತಷ್ಟು ರಂಜಿಸಲು ಶೀಘ್ರದಲ್ಲೇ ಪೋರ್ನ್ ಇಂಡಸ್ಟ್ರಿಗೆ ಕಾಲಿಡುವ ಯೋಜನೆಯನ್ನು ಕೂಡ ಹೊಂದಿರುವುದಾಗಿ ಯೂರಿ ತಿಳಿಸಿದ್ದಾರೆ.