ಕ್ರಿಕೆಟ್ ಲೋಕದಲ್ಲಿ ಹಲವಾರು ಸಾಧನೆ ಮಾಡಿರುವ ವಿರಾಟ್ ಕೊಹ್ಲಿಗೆ, ಇಂದು ಮೊಹಾಲಿಯಲ್ಲಿ ನಡೆಯುತ್ತಿರುವ ಭಾರತ ಹಾಗೂ ಶ್ರೀಲಂಕಾ ನಡುವಿನ ಟೆಸ್ಟ್ ಪಂದ್ಯ ಅತ್ಯಂತ ಸ್ಮರಣೀಯ. ಏಕೆಂದರೆ, ಇದು ವಿರಾಟ್ ಅವರ ನೂರನೇ ಟೆಸ್ಟ್ ಪಂದ್ಯ. ಈ ಮೂಲಕ ನೂರು ಟೆಸ್ಟ್ ಪಂದ್ಯಗಳಾಡಿದ ಕೆಲವೇ ಕ್ರಿಕೆಟ್ ಆಟಗಾರರಲ್ಲಿ ಕೊಹ್ಲಿ ಒಬ್ಬರಾಗಿದ್ದಾರೆ.
ಹೌದು, 2011ರ ಮಧ್ಯದಲ್ಲಿ ತಮ್ಮ ಮೊದಲ ಟೆಸ್ಟ್ ಪದ್ಯವಾಡಿದ ವಿರಾಟ್, ಹನ್ನೊಂದು ವರ್ಷಗಳ ನಂತರ 100 ಟೆಸ್ಟ್‌ಗಳ ಮೈಲಿಗಲ್ಲನ್ನು ಸಾಧಿಸಿದ್ದಾರೆ. ಅಷ್ಟೇ ಅಲ್ಲಾ ಈ ಸಾಧನೆ ಮಾಡಿದ ಭಾರತದ 12ನೇ ಆಟಗಾರ ಕೊಹ್ಲಿ ಎಂಬ ಬಿರುದನ್ನು ಪಡೆದುಕೊಂಡಿದ್ದಾರೆ.
ಇನ್ನು ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ ಸುನಿಲ್ ಗವಾಸ್ಕರ್. ಅವರ ವೃತ್ತಿಜೀವನದಲ್ಲಿ ಸುನಿಲ್ 125 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಇನ್ನು ಸಚಿನ್ ತೆಂಡೂಲ್ಕರ್ ಅವರು 200 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ, ಇದು ಸಹ ಅತಿ ದೊಡ್ಡ ವಿಶ್ವ ದಾಖಲೆ. ಒಟ್ಟಾರೆಯಾಗಿ 100 ಟೆಸ್ಟ್‌ಗಳ ಗಡಿ ಮುಟ್ಟಿದ 71ನೇ ಆಟಗಾರ ಕೊಹ್ಲಿ. ಕಾಲಿನ್ ಕೌಡ್ರೆ ಈ ಸಾಧನೆ ಮಾಡಿದ ಮೊದಲಿಗ ಅವರು 114 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ.