ನೋಕಿಯಾ 6310 ಮೊಬೈಲ್ ಫೋನ್ ಬಗ್ಗೆ ಉತ್ತಮ ವಿಮರ್ಶೆ ವ್ಯಕ್ತವಾಗಿದ್ದು, ನಿಮಗೆ ಯಾವಾಗಲೂ ಸ್ಮಾರ್ಟ್ಫೋನ್ ಅಗತ್ಯವಿಲ್ಲ ಎಂಬುದನ್ನು ಪ್ರತಿಪಾದಿಸಿದೆ.
ನೋಕಿಯಾ ಹೊಸ ಆವೃತ್ತಿಯು ದೊಡ್ಡ ಪರದೆಯನ್ನು ಹೊಂದಿದೆ. ಬಟನ್ಗಳಲ್ಲಿ ಸ್ವಲ್ಪ ವಿಭಿನ್ನ ವಿನ್ಯಾಸವನ್ನು ಹೊಂದಿದ್ದು, ಮೊದಲಿದ್ದಂತೆಯೇ ದೀರ್ಘ ಬ್ಯಾಟರಿಯನ್ನು ಹೊಂದಿದೆ. ಹೀಗಾಗಿ ಒಂದು ಕಾಲದಲ್ಲಿ ನೋಕಿಯಾ ಐಕಾನ್ ಎಂದೇ ಜನಜನಿತವಾಗಿದ್ದ ಮೊಬೈಲ್ ಮತ್ತೆ ತನ್ನದೇ ಶೈಲಿಯಲ್ಲಿ ಹಿಂತಿರುಗಿದೆ.
ಇದೀಗ ನೋಕಿಯಾ 6310 ವಿಮರ್ಶೆ ಪ್ರಕಾರ, ಸಾಮಾಜಿಕ ಜಾಲತಾಣ ಉಪಯೋಗಿಸುವುದರಿಂದ ದೂರವಿರುವುದು ಮುಂತಾದವುಗಳ ಬಗ್ಗೆ ಮಾತನಾಡಲಾಗುತ್ತದೆ. ಕೆಲವೊಮ್ಮೆ ಮನಸ್ಸಿಗೆ ಬೇಸರವಾದಾಗ ವಾಟ್ಸಾಪ್ ಸಂದೇಶಗಳು, ಇಮೇಲ್ ಗಳಿಗೆ ಪ್ರತಿಕ್ರಿಯೆ ನೀಡದಿರಲು ಮತ್ತು ಸಾಮಾಜಿಕ ಮಾಧ್ಯಮದಿಂದ ದೂರವಿರಲು ಬಯಸುವ ಅನೇಕ ಸಂದರ್ಭಗಳಿವೆ.
BREAKING: ಬಿಜೆಪಿ ಶಾಸಕರ ಕಚೇರಿಗೆ ಕಲ್ಲು, ಕಿಟಕಿ ಗಾಜು ಪುಡಿಪುಡಿ
ಇಂತಹ ಸಂದರ್ಭಗಳಲ್ಲಿ, ಸ್ಮಾರ್ಟ್ಫೋನ್ನೊಂದಿಗೆ ಎಲ್ಲಾ ಸಂಬಂಧಗಳನ್ನು ಕಡಿತಗೊಳಿಸುವ ಆಲೋಚನೆಯು ಮನಸ್ಸನ್ನು ದಾಟಿರುತ್ತದೆ. ವಾಕಿಂಗ್ ಮಾಡುವ ವೇಳೆಯಲ್ಲಿ ಮರುರೂಪಿಸಲಾದ ನೋಕಿಯಾ 6310ವನ್ನು ಬಳಸುವ ಪ್ರಯೋಗವನ್ನು ಪ್ರಾರಂಭಿಸಬಹುದು. ಹಾಗಂತ ಸ್ಮಾರ್ಟ್ಫೋನ್ ನಿಂದ ಸಂಪೂರ್ಣವಾಗಿ ದೂರವಿರುವುದು ಎಂಬರ್ಥವಲ್ಲ. ಹೈಪರ್-ಕನೆಕ್ಟೆಡ್ ಪ್ರಪಂಚದಿಂದ ವಿರಾಮವನ್ನು ತೆಗೆದುಕೊಳ್ಳಬೇಕಾದ ದಿನದಲ್ಲಿ ನಿರ್ದಿಷ್ಟ ಸಮಯದವರೆಗೆ ಈ ವೈಶಿಷ್ಟ್ಯದ ಫೋನ್ ಅನ್ನು ಬಳಸಬಹುದು.
ನೀವು ಸ್ಮಾರ್ಟ್ಫೋನ್ನೊಂದಿಗಿನ ನಿಮ್ಮ ಸಂಬಂಧವನ್ನು ಮರುಚಿಂತನೆ ಮಾಡಲು ಬಯಸಿದರೆ, ನೋಕಿಯಾ 6310ನೊಂದಿಗೆ ನೀವು ಪ್ರಯತ್ನಿಸಬಹುದು. ಮೂಲ ನೋಕಿಯಾ 6310, 2001 ರಲ್ಲಿ ಹೊರಬಂದಿತು.