alex Certify ಮತ್ತೆ ಮತ್ತೆ ಸಿಹಿ ತಿನ್ನಬೇಕು ಅನಿಸಿದರೆ ಈ ಗಂಭೀರ ಕಾಯಿಲೆಯ ಸಂಕೇತ ಅದು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೆ ಮತ್ತೆ ಸಿಹಿ ತಿನ್ನಬೇಕು ಅನಿಸಿದರೆ ಈ ಗಂಭೀರ ಕಾಯಿಲೆಯ ಸಂಕೇತ ಅದು…!

ಸಿಹಿ ತಿನ್ನಲು ಇಷ್ಟಪಡುವ ಅನೇಕ ಜನರಿದ್ದಾರೆ. ಅನೇಕರು ಬೆಳಗ್ಗೆ, ಸಂಜೆ ಯಾವ ಸಮಯದಲ್ಲಾದರೂ ಸಿಹಿ ತಿಂಡಿ ಇಷ್ಟಪಡುತ್ತಾರೆ. ಊಟವಾದ ನಂತರ ಸ್ವೀಟ್‌ ತಿನ್ನುವ ಅಭ್ಯಾಸ ಹಲವರಿಗಿದೆ. ಇಂದಿನ ಜೀವನಶೈಲಿಯ ಪ್ರಕಾರ ಜನರು ಹೆಚ್ಚು ಜಂಕ್ ಫುಡ್ ತಿನ್ನುತ್ತಾರೆ. ಅದೇ ರೀತಿ ಸಿಹಿತಿಂಡಿಗಳನ್ನೂ ತಿನ್ನುತ್ತಿದ್ದಾರೆ. ಇದರ ಪರಿಣಾಮ ಎಲ್ಲಾ ವಯಸ್ಸಿನ ಜನರಲ್ಲಿ ಗೋಚರಿಸುತ್ತದೆ. ಸಿಹಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದೇ ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಮತ್ತೆ ಮತ್ತೆ ಸಿಹಿ ತಿನ್ನಬೇಕು ಅನಿಸುವುದು ಸಹಜವೇ ಅನ್ನೋದು ಅನೇಕರ ಪ್ರಶ್ನೆ. ಅಪರೂಪಕ್ಕೊಮ್ಮೆ ಸಿಹಿ ತಿನ್ನಬೇಕು ಎನಿಸಿದರೆ ಅದು ಸಹಜ. ಆದರೆ ಪ್ರತಿದಿನ ಸಿಹಿ ತಿನ್ನಬೇಕೆಂಬ ಕ್ರೇವಿಂಗ್‌ ಇದ್ದರೆ ಅದನ್ನು ಲಘುವಾಗಿ ತೆಗೆದುಕೊಳ್ಳಬಾರದು. ಇದು ಅನಾರೋಗ್ಯದ ಸಂಕೇತವಾಗಿರಬಹುದು. ಕೆಲವರಿಗೆ ಮತ್ತೆ ಮತ್ತೆ ಸಿಹಿ ತಿನ್ನಬೇಕೆಂಬ ಬಯಕೆಯಾಗುವುದೇಕೆ ಎಂಬುದನ್ನು ನೋಡೋಣ.

ದೇಹದಲ್ಲಿ ಪೋಷಣೆಯ ಕೊರತೆ : ಕೆಲವು ಪೋಷಕಾಂಶಗಳ ಕೊರತೆಯಿಂದಾಗಿ ಮತ್ತೆ ಮತ್ತೆ ಸಿಹಿ ತಿನ್ನುವ ಆಸೆಯಾಗುತ್ತದೆ. ಮೆಗ್ನೀಸಿಯಮ್, ಕ್ರೋಮಿಯಂ ಮತ್ತು ಸತುವಿನ ಕೊರತೆ ಸಿಹಿಯ ಕಡು ಬಯಕೆಯನ್ನು ಹೆಚ್ಚಿಸುತ್ತದೆ. ಇವೆಲ್ಲವೂ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತವೆ. ಕಬ್ಬಿಣಾಂಶದ ಕೊರತೆಯಿದ್ದರೂ ಸಿಹಿ ತಿನ್ನಬೇಕು ಅನ್ನಿಸುತ್ತದೆ.

ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಇಳಿಕೆ : ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ಏರಿಳಿತಗಳಿದ್ದಾಗ ಸಿಹಿ ತಿನ್ನಬೇಕು ಅನ್ನಿಸುತ್ತದೆ. ಹೆಚ್ಚು ಸಿಹಿತಿಂಡಿಗಳನ್ನು ತಿನ್ನುವುದರಿಂದ ಸಕ್ಕರೆ ಮಟ್ಟವು ಏರಲು ಮತ್ತು ಇಳಿಯಲು ಪ್ರಾರಂಭಿಸುತ್ತದೆ.

ಹಾರ್ಮೋನ್‌ ಅಸಮತೋಲನ: ಹಾರ್ಮೋನ್‌ ಅಸಮತೋಲನವು ಇಡೀ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಋತುಬಂಧದ ಸಮಯದಲ್ಲಿ ಅನೇಕ ಬದಲಾವಣೆಗಳಾಗುತ್ತವೆ. ಈ ಸಂದರ್ಭದಲ್ಲಿ ಸಿಹಿ ತಿನ್ನುವ ಬಯಕೆ ಹೆಚ್ಚಾಗುತ್ತದೆ.

ಸೂಕ್ಷ್ಮಜೀವಿಯ ಅಸಮತೋಲನ: ಕರುಳಿನಲ್ಲಿ ಕಂಡುಬರುವ ಬ್ಯಾಕ್ಟೀರಿಯಾವನ್ನು ಮೈಕ್ರೋಬಯೋಮ್ ಎಂದು ಕರೆಯಲಾಗುತ್ತದೆ. ಅದರ ಪ್ರಮಾಣವು ಹೊಟ್ಟೆಯಲ್ಲಿ ಹೆಚ್ಚಾಗಲು ಪ್ರಾರಂಭಿಸಿದಾಗ ಸಿಹಿ ತಿನ್ನುವ ಕಡುಬಯಕೆ ಪ್ರಾರಂಭವಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...