alex Certify ಮತ್ತೆ ಮತ್ತೆ ನೋಡಬೇಕೆನಿಸುವಂತೆ ಮಾಡುತ್ತೆ ತಂದೆ – ಮಗಳ ಬಾಂಧವ್ಯದ ಈ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೆ ಮತ್ತೆ ನೋಡಬೇಕೆನಿಸುವಂತೆ ಮಾಡುತ್ತೆ ತಂದೆ – ಮಗಳ ಬಾಂಧವ್ಯದ ಈ ವಿಡಿಯೋ

ಅಪ್ಪಾ ಐ ಲವ್‌ಯೂಪಾ….. ಈ ಹಾಡನ್ನ ನೀವೆಲ್ಲ ಕೇಳೇ ಕೇಳಿರ್ತಿರಾ? ತಂದೆ, ಮಗಳ ಪ್ರೀತಿ-ಬಾಂಧವ್ಯದ ಈ ಹಾಡು ಕೇಳಿ ಭಾವುಕರಾಗದವರೇ ಯಾರೂ ಇಲ್ಲ. ಇತ್ತೀಚೆಗೆ ಸೊಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋ ಒಂದು ಈ ಹಾಡು ಮತ್ತೆ ಮತ್ತೆ ನೆನಪು ಮಾಡಿಕೊಳ್ಳುವಂತೆ ಮಾಡಿತ್ತು.

ಅದೊಂದು ಘಟಿಕೋತ್ಸವ ಕಾರ್ಯಕ್ರಮ. ಅಲ್ಲಿ ಆಶಿಶ್ ನೆಲವಾಡೆ ತಮ್ಮ ಪದವಿ ಪ್ರಮಾಣ ಪತ್ರ ಸ್ವೀಕರಿಸಲು ವೇದಿಕೆಗೆ ಬರುತ್ತಾರೆ. ಅಲ್ಲೇ ಜನರ ಮಧ್ಯದಲ್ಲಿ ಇದ್ದ ಅವರ ಪುಟ್ಟ ಮಗಳು, ಹೆಮ್ಮೆಯಿಂದ ಡ್ಯಾಡಿ ಕಂಗ್ರಾಜ್ಯುಲೇಶನ್ (ಅಭಿನಂದನೆಗಳು) ಡ್ಯಾಡಿ ಎಂದು ಕೂಗುತ್ತಾಳೆ. ಮಗಳ ದನಿ ಕೇಳಿದಾಕ್ಷಣ ಆಶಿಶ್ ಖುಷಿ ದುಪ್ಪಟ್ಟಾಗಿರುತ್ತೆ. ಅವರು ವೇದಿಕೆ ಮೇಲಿಂದಾನೇ ಲವ್‌ ಯೂ ಮಗಳೇ ಅಂತ ಹೇಳಿ, ಕೈಯಿಂದ ಹಾರ್ಟ್ ಮಾಡಿ ಮಗಳಿಗೆ ತೋರಿಸುತ್ತಾರೆ. ಅದಕ್ಕೆ ಪುಟಾಣಿ ಲವ್ ಯು ಡ್ಯಾಡಿ ಅಂತ ಹೇಳುತ್ತಾಳೆ. ತಂದೆ-ಮಗಳ ಈ ಅಪರೂಪದ ಕ್ಷಣ ನೋಡಿ ಅಲ್ಲಿದ್ದವರೆಲ್ಲ ಭಾವುಕರನ್ನಾಗಿ ಮಾಡಿತ್ತು.

ತಂದೆ-ಮಗಳ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆಶಿಶ್ ನೆನಪಾಡೆ ಇವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ನನ್ನ ಪುಟ್ಟ ರಾಜಕುಮಾರಿ ಇಲ್ಲದೇ ಇದ್ದಿದ್ದರೆ, ನನ್ನ ಪದವಿ ಸಮಾರಂಭ ಅದ್ಭುತವಾಗಿರುತ್ತಿರಲಿಲ್ಲ. ಶಾಂತವಾಗಿದ್ದ ಸಭಾಂಗಣದಲ್ಲಿ ”ಅಪ್ಪಾ ಅಭಿನಂದನೆಗಳು, ನಾನು ನಿನ್ನನ್ನು ಪ್ರೀತಿಸುತ್ತೇನೆ” ಅನ್ನುವ ಈ ಮಾತುಗಳು ನನ್ನ ಕಿವಿಯಲ್ಲೂ ಪ್ರತಿಧ್ವನಿಸುತ್ತಿದೆ. ಅಲ್ಲಿದ್ದವರ ಹೃದಯ ಕೂಡಾ ತುಂಬಿ ಬಂದಿತ್ತು. ಈ ಪದವಿ ಪ್ರಶಸ್ತಿಗಿಂತ ಹೆಚ್ಚಾಗಿ ನನ್ನ ಮಗಳಿಗೆ ತಂದೆಯಾಗಿರುವುದು ನನ್ನ ದೊಡ್ಡ ಸಾಧನೆ ಎಂದು ನಾನು ಭಾವಿಸುತ್ತೇನೆ. ಆಕೆ ವಿಶ್ವದ ಅತ್ಯುತ್ತಮ ಮಗಳು, ಎಲ್ಲರೂ ಆಕೆಯನ್ನ ನೋಡಿ ” ತಂದೆಯಂತೆಯೇ ಮಗಳು ” ಅಂತ ಹೇಳುತ್ತಾರೆ. ಇದು ನನ್ನ ಜೀವನದ ಅದ್ಭುತ ಕ್ಷಣ. ಇದು ನನ್ನ ಹೃದಯದಲ್ಲಿ ಶಾಶ್ವತವಾಗಿ ಉಳಿಯುತ್ತದೆ ಎಂದು ಮನಸ್ಸಿನ ಮಾತುಗಳನ್ನ ಬರೆದುಕೊಂಡಿದ್ದಾರೆ.

ವೈರಲ್ ಆಗಿರೋ ಈ ವಿಡಿಯೋವನ್ನ ಈಗಾಗಲೇ 1.2 ಮಿಲಿಯನ್‌ಗೂ ಅಧಿಕ ಲೈಕ್‌ಗಳನ್ನ ಪಡೆದುಕೊಂಡಿದೆ. ಕೆಲವರು ಈ ವಿಡಿಯೋ ನೋಡಿ “ಇದು ಮತ್ತೆ ಮತ್ತೆ ನೋಡಬೇಕು ಅನ್ನಿಸೋ ವಿಡಿಯೋ ಅಂತ ಕಾಮೆಂಟ್ ಮಾಡಿದ್ದಾರೆ. ಮನಸ್ಸಿಗೆ ಖುಷಿ ಕೊಡುವಂತಹ ವಿಡಿಯೋ ಅಂತ ಇನ್ನೊಬ್ಬರು ಕಾಮೆಂಟ್‌ನಲ್ಲಿ ಬರೆದಿದ್ದಾರೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...