ಮಗು ಚಿವುಟಿ ತೊಟ್ಟಿಲು ತೂಗೋದು ಅಂತಾರೆ. ಇದು ಅಮೇರಿಕಾಕ್ಕೆ ಒಪ್ಪುವಂತಹ ಮಾತು ಅಂದರೆ ತಪ್ಪಾಗಲ್ಲ. ಪಾಕ್ ನ ಉಗ್ರವಾದವನ್ನು ವಿಶ್ವಮಟ್ಟದಲ್ಲಿ ಖಂಡಿಸಿದ್ದ ಅಮೆರಿಕಾ ಇದೀಗ ಪಾಕ್ ಗೆ ನೆರವು ನೀಡ್ತಾ ಇದೆಯಂತೆ. ಪಾಕ್ ವಾಯುಸೇನೆಗೆ ಸಾವಿರಾರು ರೂಪಾಯಿ ಹಣದ ನೆರವು ನೀಡಿದೆ.
ಹೌದು, ದೊಡ್ಡ ಮಟ್ಟದಲ್ಲಿ ಪಾಕ್ ಉಗ್ರವಾದವನ್ನು ಖಂಡಿಸುತ್ತಲೇ ಬಂದಿದ್ದ ಅಮೆರಿಕಾ ಹೀಗೆ ಹಿಂಬದಿಯಿಂದ ಹಣದ ನೆರವು ನೀಡ್ತಾ ಇರೋದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. 39 ವರ್ಷದ ಹಳೆಯ ಎಫ್ 16 ಫೈಟರ್ ಜೆಟ್ ನ ಸುಧಾರಣೆಗೆಂದು 45 ಕೋಟಿ ಯುಎಸ್ ಡಾಲರ್, ಭಾರತೀಯ ರುಪಾಯಿ ಮೌಲ್ಯ 3584 ರುಪಾಯಿ ಆಗಲಿದೆ. ಇಷ್ಟು ಹಣವನ್ನು ಪಾಕ್ ಗೆ ನೆರವು ನೀಡಿದೆ ಅಮೆರಿಕಾ.
ಮತ್ತೊಂದು ವಿಚಾರ ಏನಂದ್ರೆ, ಇದೇ ಫೈಟರ್ ಜೆಟ್ ನ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಹೊಡೆದುರುಳಿಸಿದ್ದು. ಈ ಜೆಟ್ ಗಳು ಸಾಕಷ್ಟು ಹಳೆಯದಾಗಿವೆಯಂತೆ. ಹೀಗಾಗಿ ಅವುಗಳ ಮೈಂಟೇನೆನ್ಸ್ ಗೋಸ್ಕರ ಹಣ ನೀಡ್ತಾ ಇದೆ ಎಂದು ಹೇಳಲಾಗುತ್ತಿದೆ.