ಬೆಂಗಳೂರು: ಆಸಿಡ್ ದಾಳಿಗೊಳಗಾಗಿದ್ದ ಬೆಂಗಳೂರಿನ ಯುವತಿ ಇದೀಗ ಮತ್ತೆ ಐಸಿಯುಗೆ ಶಿಫ್ಟ್ ಆಗಿದ್ದು, ಚಿಕಿತ್ಸೆ ಮುಂದುವರೆದಿದೆ.
ಆಸಿಡ್ ದಾಳಿಗೊಳಗಾಗಿದ್ದ ಸಂತ್ರಸ್ತ ಯುವತಿಗೆ ಶೇ.35ರಷ್ಟು ಸುಟ್ಟ ಭಾಗವನ್ನು ಪ್ಲಾಸ್ಟಿಕ್ ಸರ್ಜರಿ ಮಾಡಲಾಗಿತ್ತು. ವೈದ್ಯರು ಐಸಿಯುನಿಂದ ವಾರ್ಡ್ ಗೆ ಸ್ಥಳಾಂತರಿಸಿದ್ದರು. ಆದರೆ ಇದೀಗ ಸರ್ಜರಿ ಮಾಡಿದ ಭಾಗದಲ್ಲಿ ಫಂಗಸ್ ಅಟ್ಯಾಕ್ ಆಗಿದ್ದು, ಯುವತಿ ನೋವಿನಿಂದ ಬಳಲುತ್ತಿದ್ದಾಳೆ. ಯುವತಿಯನ್ನು ಮತ್ತೆ ಐಸಿಯುಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಶೇ.40 ಭಾರತೀಯರಲ್ಲಿ ಶುದ್ಧ ಅಡುಗೆ ಇಂಧನ ಇಲ್ಲ, ಶೇ.20 ರಷ್ಟು ಜನರಿಂದ ಇನ್ನೂ ಬಯಲುಶೌಚ ಬಳಕೆ; ಸಮೀಕ್ಷೆಯಲ್ಲಿ ಆಘಾತಕಾರಿ ಮಾಹಿತಿ ಬಹಿರಂಗ
ಯುವತಿಗೆ ಪೈಪ್ ಮೂಲಕ ಕೇವಲ ದ್ರವ ಆಹಾರ ಮಾತ್ರ ನೀಡಲಾಗುತ್ತಿದ್ದು, ಇನ್ನೂ ಎರಡು ರೀತಿಯ ಚಿಕಿತ್ಸೆ ಮಾಡುವ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.