ಬೆಳಗಾವಿ: ಮತಾಂತರ ನಿಷೇಧ ಕಾಯ್ದೆ ಜಾರಿಗೆ ನಮ್ಮ ವಿರೋಧವಿದೆ. ಇಂತಹ ಜನ ವಿರೋಧಿ ಕಾಯ್ದೆ ಜಾರಿ ಮಾಡುವ ಬದಲು ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೆ ತರಲಿ ಎಂದು ಎಂ ಎಲ್ ಸಿ ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಇಬ್ರಾಹಿಂ, ಮತಾಂತರ ನಿಷೇಧ ಮಾಡುವ ಬದಲು ರಾಜಕೀಯ ನಾಯಕರು ಪಕ್ಷಾಂತರ ಮಾಡುವುದನ್ನು ಮೊದಲು ನಿಷೇಧಿಸಲಿ. ಇಂತಹ ಜನ ವಿರೋಧಿ ಕಾಯ್ದೆ ಜಾರಿ ಸರಿಯಲ್ಲ ಎಂದು ಗುಡುಗಿದರು.
ಮರವನ್ನು ಮದುವೆಯಾದ ಮಹಿಳೆ..! ಕಾರಣವೇನು ಗೊತ್ತಾ..?
ಮುಸ್ಲೀಂರಾದರೂ ಅವರು ಭಾರತೀಯರಲ್ಲವೇ ? ಮುಸಲ್ಮಾನರಾದ ಮಾತ್ರಕ್ಕೆ ಪಾಕಿಸ್ತಾನಕ್ಕೆ ಹೋಗಬೇಕೆ ? ಮುಂದೆ ನಮ್ಮ ಸರ್ಕಾರ ಬಂದಾಗ ಇಂತಹ ಎಲ್ಲಾ ಕಾಯ್ದೆ ವಾಪಸ್ ಪಡೆಯುತ್ತೇವೆ ಎಂದರು.