ಮತದಾನದ ಪ್ರಮಾಣ ಜಾಸ್ತಿ ಮಾಡಲು ಮತ್ತು ಮತದಾನ ಮಾಡುವಂತೆ ಜನರಲ್ಲಿ ಜಾಗೃತಿ ಮೂಡಿಸುವ ಪ್ರೇರೇಪಣೆಯ ಕೆಲಸವಾಗಿ ಕೆಲವು ಹೋಟೆಲ್, ರೆಸ್ಟೋರೆಂಟ್ ಗಳು, ಅಮ್ಯೂಸ್ ಮೆಂಟ್ ಪಾರ್ಕ್ ಗಳು ಬೆಂಗಳೂರಲ್ಲಿ ಬಗೆಬಗೆಯ ಆಫರ್ ಮಾಡುತ್ತಿವೆ.
ಮತದಾನ ಮಾಡಿ ಬಂದು ಶಾಯಿ ತೋರಿಸಿದರೆ ನಮ್ಮ ಹೋಟೆಲ್ ನಲ್ಲಿ ಉಚಿತ ಊಟ, ಶೇಕಡಾ 50 ರಷ್ಟು ರಿಯಾಯಿತಿ ಎಂದೆಲ್ಲಾ ಆಫರ್ ಘೋಷಿಸಿವೆ. ಈ ಆಫರ್ ಬಗ್ಗೆ ತಮ್ಮ ಹೋಟೆಲ್ ಮುಂದೆ ಬೋರ್ಡ್ ಕೂಡ ಹಾಕಿವೆ ಮತ್ತು ಪತ್ರಿಕೆಗಳಲ್ಲಿ ಪ್ರಕಟಿಸಿವೆ.
ಇದನ್ನ ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಿದ್ದು ಇಂತಹ ಕ್ರಮಗಳು ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ ಎಂದು ಸ್ಪಷ್ಟವಾಗಿ ಎಚ್ಚರಿಸಿವೆ. ಈ ರೀತಿಯ ಪ್ರಕಟಣೆಗಳಿಗೆ ಸಂಬಂಧಿಸಿದಂತೆ ಹೋಟೆಲ್ ಮಾಲೀಕರನ್ನೇ ನೇರ ಹೊಣೆಗಾರರನ್ನಾಗಿಸಿ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿಗಳು ಮತ್ತು ಬಿಬಿಎಂಪಿಯ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಎಚ್ಚರಿಕೆಯ ಆದೇಶ ಹೊರಡಿಸಿದ್ದಾರೆ.