ಮೇ 10 ರ ನಾಳೆ ರಾಜ್ಯ ವಿಧಾನಸಭಾ ಚುನಾವಣೆಗೆ ಮತದಾನ ನಡೆಯುತ್ತಿದ್ದು, ಪ್ರಜಾಪ್ರಭುತ್ವದ ಅತಿ ದೊಡ್ಡ ಹಬ್ಬದಲ್ಲಿ ಪಾಲ್ಗೊಳ್ಳಲು ಪರ ಊರುಗಳಲ್ಲಿ ನೆಲೆಸಿರುವವರು ತಮ್ಮ ತಮ್ಮ ಊರುಗಳಿಗೆ ಮರಳುತ್ತಿದ್ದಾರೆ. ಆದರೆ ಚುನಾವಣಾ ಕಾರ್ಯಕ್ಕಾಗಿ ಸಾವಿರಾರು ಸಂಖ್ಯೆಯಲ್ಲಿ ಬಸ್ಸುಗಳನ್ನು ತೆಗೆದುಕೊಂಡಿರುವ ಕಾರಣ ಪ್ರಯಾಣಿಕರಿಗೆ ತೊಂದರೆಯಾಗಿದೆ.
ಇದರ ಮಧ್ಯೆ ನಾಳೆ ಮತದಾನಕ್ಕೆ ತೆರಳುವವರಿಗೆ ಅನುಕೂಲವಾಗಲಿ ಎಂಬ ನಿಟ್ಟಿನಿಂದ ಬೆಂಗಳೂರು ರೈಲ್ವೆ ನಿಲ್ದಾಣಗಳಿಂದ ಇಂದು ಮೂರು ವಿಶೇಷ ರೈಲುಗಳು ಸಂಚರಿಸಲಿದ್ದು, ಬೆಳಗಾವಿ, ಮುರುಡೇಶ್ವರ ಮತ್ತು ಬೀದರ್ ವರೆಗೆ ಹೋಗಲಿವೆ. ಈ ರೈಲುಗಳ ವೇಳಾಪಟ್ಟಿ ಕೆಳಕಂಡಂತಿದೆ.
ಮೇ 9 ರ ರಾತ್ರಿ 8.30 ಕ್ಕೆ ವಿಶ್ವೇಶ್ವರಯ್ಯ ಟರ್ಮಿನಲ್ ನಿಂದ ಬೆಳಗಾವಿಗೆ, ಮೇ 10ರಂದು ಬೆಳಗಾವಿಯಿಂದ ವಿಶ್ವೇಶ್ವರ ಟರ್ಮಿನಲ್ ಗೆ ಸಂಜೆ 5:30ಕ್ಕೆ, ಮೇ 9ರಂದು ಯಶವಂತಪುರದಿಂದ ಮುರುಡೇಶ್ವರಕ್ಕೆ ರಾತ್ರಿ 11:55 ಕ್ಕೆ, ಮೇ 10ರಂದು ಮುರುಡೇಶ್ವರದಿಂದ ಯಶವಂತಪುರಕ್ಕೆ ರಾತ್ರಿ 1:30ಕ್ಕೆ, ಮೇ 9ರಂದು ಕೆಸಿಆರ್ ನಿಲ್ದಾಣದಿಂದ ಬೀದರ್ ಗೆ ಸಂಜೆ 5:00 ಗಂಟೆಗೆ ಹಾಗೂ ಮೇ 10 ರಂದು ರಾತ್ರಿ 8 ಗಂಟೆಗೆ ಬೀದರ್ ನಿಂದ ಕೆಸಿಆರ್ ನಿಲ್ದಾಣಕ್ಕೆ ರೈಲು ಸಂಚರಿಸಲಿದೆ.