ಎಲ್ಲರ ಅಡುಗೆ ಮನೆಯಲ್ಲೂ ಅಲ್ಯೂಮಿನಿಯಂ, ಸ್ಟೀಲ್ ಮತ್ತು ನಾನ್-ಸ್ಟಿಕ್ ಪಾತ್ರೆಗಳನ್ನು ಕಾಣಬಹುದು. ಜನರ ಜೀವನ ಶೈಲಿ ಬದಲಾದಂತೆ ಜನರು ಮಣ್ಣಿನ ಮಡಿಕೆಯಿಂದ ದೂರವಾಗಿ ಸ್ಟೀಲ್, ನಾನ್ ಸ್ಟಿಕ್ ಪಾತ್ರೆ ಬಳಸಲು ಶುರು ಮಾಡಿದ್ರು. ಆದ್ರೆ ಈಗ ಮತ್ತೆ ಮಣ್ಣಿನ ಮಡಿಕೆಗಳಿಗೆ ಬೇಡಿಕೆ ಹೆಚ್ಚಾಗ್ತಿದೆ.
ಆರೋಗ್ಯದ ದೃಷ್ಟಿಯಿಂದ ಮಣ್ಣಿನ ಮಡಿಕೆಯಲ್ಲಿ ಬೇಯಿಸಿದ ಆಹಾರ ತುಂಬಾ ಪ್ರಯೋಜನಕಾರಿ. ಮಣ್ಣಿನ ಮಡಿಕೆಯನ್ನು ಸ್ವಚ್ಛಗೊಳಿಸುವುದು ಸುಲಭ. ಇದಕ್ಕೆ ಸೋಪ್ ಬಳಸಬೇಕಾಗಿಲ್ಲ. ಬಿಸಿ ನೀರಿನಲ್ಲಿ ತೊಳೆದ್ರೆ ಸಾಕಾಗುತ್ತದೆ.
ಕಡಿಮೆ ಉರಿಯಲ್ಲಿ ಮಣ್ಣಿನ ಮಡಿಕೆಯಲ್ಲಿ ಆಹಾರ ಬೇಯಿಸಲಾಗುತ್ತದೆ. ಇದ್ರಿಂದ ಆಹಾರದ ಪೌಷ್ಠಿಕಾಂಶ ಕಡಿಮೆಯಾಗುವುದಿಲ್ಲ. ದ್ವಿದಳ ಧಾನ್ಯಗಳು, ತರಕಾರಿಗಳನ್ನು ಬೇಯಿಸಿದಾಗ ಶೇಕಡಾ 100ರಷ್ಟು ಪೋಷಕಾಂಶ ಸಿಗುತ್ತದೆ.
ಜೇಡಿ ಮಣ್ಣಿನ ತವಾ ಕೂಡ ಸದ್ಯ ಮಾರುಕಟ್ಟೆಯಲ್ಲಿದೆ. ಮಣ್ಣಿನ ಕುಕ್ಕರ್ ಕೂಡ ಬಂದಿದೆ. ಇವೆಲ್ಲ ಅಜೀರ್ಣ, ಹೊಟ್ಟೆ ಸಮಸ್ಯೆಯನ್ನು ಕಡಿಮೆ ಮಾಡುತ್ತವೆ. ಮಣ್ಣಿನ ಮಡಿಕೆಯಲ್ಲಿ ಆಹಾರ ಸೇವನೆ ಮಾಡುವುದ್ರಿಂದ ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ.
ಮಣ್ಣಿನ ಪಾತ್ರೆಯಲ್ಲಿ ತಯಾರಿಸಿದ ಆಹಾರ ರುಚಿಕರವಾಗಿರುತ್ತದೆ. ಮಣ್ಣಿನ ವಾಸನೆಯಿರುವ ಜೊತೆಗೆ ಆಹಾರ ತಂಪಾಗಿರುತ್ತದೆ.
ಮಣ್ಣಿನ ಮಡಿಕೆಯನ್ನು 12 ಗಂಟೆಗಳ ಕಾಲ ನೀರಿನಲ್ಲಿ ನೆನೆಹಾಕಿ, ಬಿಸಿಲಿನಲ್ಲಿ ಒಣಗಿಸಿ ಸಣ್ಣ ಉರಿಯಲ್ಲಿ ಆಹಾರ ತಯಾರಿಸಬೇಕು. ಸಣ್ಣ ಮಣ್ಣಿನ ಪಾತ್ರೆಗಳನ್ನು ಕನಿಷ್ಠ 6 ಗಂಟೆಗಳ ಕಾಲ ನೆನೆಹಾಕಬೇಕು.