alex Certify ಮಣ್ಣಿನ ಉಳಿವಿಗಾಗಿ 30 ಸಾವಿರ ಕಿ.ಮೀ. ಏಕಾಂಗಿ ಬೈಕ್​ ರ್ಯಾಲಿ ಆರಂಭಿಸಲು ಮುಂದಾದ ಸದ್ಗುರು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಣ್ಣಿನ ಉಳಿವಿಗಾಗಿ 30 ಸಾವಿರ ಕಿ.ಮೀ. ಏಕಾಂಗಿ ಬೈಕ್​ ರ್ಯಾಲಿ ಆರಂಭಿಸಲು ಮುಂದಾದ ಸದ್ಗುರು….!

ಈಶ ಯೋಗ ಕೇಂದ್ರದಲ್ಲಿ 12 ಗಂಟೆಗಳ ಮಹಾಶಿವರಾತ್ರಿ ಸಾಂಸ್ಕೃತಿಕ ಸಂಭ್ರಮದಲ್ಲಿ ಹೈವೋಲ್ಟೇಜ್​​ ಸಂಗೀತ ಹಾಗೂ ನೃತ್ಯಗಳ ನಡುವೆ ಸದ್ಗುರು ಜಗ್ಗಿ ವಾಸುದೇವ್​ ಮಣ್ಣನ್ನು ರಕ್ಷಿಸುವ ಸಲುವಾಗಿ ತಾವು 100 ದಿನಗಳ ಕಾಲ ಬೈಕ್​ ರ್ಯಾಲಿ ನಡೆಸುತ್ತಿರುವುದಾಗಿ ಹೇಳಿದ್ದಾರೆ.

ಭೂಮಿ – ಮಣ್ಣಿನ ಅಳಿವನ್ನು ತಡೆಯುವಂತೆ ಒತ್ತಾಯಿಸಲು ಪ್ರಪಂಚದಾದ್ಯಂತ ಎಲ್ಲಾ ನಾಯಕರನ್ನು ಒತ್ತಾಯಿಸಲು ತಾವು ಲಂಡನ್​ನಿಂದ ಭಾರತಕ್ಕೆ ಏಕಾಂಗಿ ಬೈಕ್​ ರ್ಯಾಲಿಯನ್ನು ನಡೆಸಲು ಯೋಜಿಸಿರುವುದಾಗಿ ಘೋಷಣೆ ಮಾಡಿದ್ದಾರೆ. 30000 ಕಿಲೋಮೀಟರ್​ ದೂರದ ಈ ಏಕಾಂಗಿ ಬೈಕ್​ ರ್ಯಾಲಿಯನ್ನು ಸದ್ಗುರು 100 ದಿನಗಳಲ್ಲಿ ಪೂರೈಸಲಿದ್ದು 27 ದೇಶಗಳಿಗೆ ಭೇಟಿ ನೀಡಲಿದ್ದಾರೆ.

ಈ ನೂರು ದಿನಗಳ ಅವಧಿಯಲ್ಲಿ ನಿಮ್ಮಲ್ಲಿರುವ ಪ್ರತಿಯೊಬ್ಬರು ದಿನದಲ್ಲಿ ಕನಿಷ್ಟ 5 ರಿಂದ 10 ನಿಮಿಷಗಳ ಕಾಲ ಮಣ್ಣಿನ ಬಗ್ಗೆ ಮಾತನಾಡಬೇಕು. ಇಡೀ ಜಗತ್ತು ಈ ನೂರು ದಿನಗಳ ಅವಧಿಯಲ್ಲಿ ಮಣ್ಣಿನ ಬಗ್ಗೆ ಮಾತನಾಡಬೇಕು ಎಂದು ಹೇಳುತ್ತಾ ಸದ್ಗುರು ಮಣ್ಣು ಉಳಿಸಿ ಆಂದೋಲನವನ್ನು ಆರಂಭಿಸಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...