ಇಂದು ಮಣಿಪುರ ವಿಧಾನಸಭಾ ಚುನಾವಣೆಯ ಮೊದಲನೇ ಹಂತ ಆರಂಭವಾಗಿದೆ. ಆದರೆ ಮತದಾನ ಆರಂಭವಾದ ಕೆಲವೇ ಗಂಟೆಗಳಲ್ಲಿ ಮಣಿಪುರದ ಕೀರಾವೊ ಕ್ಷೇತ್ರದಲ್ಲಿ ಕಲ್ಲು ತೂರಾಟ ಮತ್ತು ಗುಂಡಿನ ದಾಳಿ ನಡೆದಿದೆ ಎಂದು ವರದಿಯಾಗಿದೆ.
ಇತ್ತ ಒಂದು ಪಕ್ಷದವರು ಬೂತ್ ವಶಪಡಿಸಿಕೊಂಡರೆಂಬ ಆರೋಪದ ಮೇಲೆ ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ ನಡುವೆ ಘರ್ಷಣೆ ಉಂಟಾಗಿದೆ. ಇದರಿಂದ ಕಾಂಗ್‌ಪೋಕ್ಪಿ ಜಿಲ್ಲೆಯ ನ್ಯೂ ಕೀಥೆಲ್‌ಮಂಬಿ ಕ್ಷೇತ್ರದಲ್ಲಿ ಮತದಾನಕ್ಕೆ ಅಡ್ಡಿಯುಂಟಾಯಿತು.
ಇನ್ನು ಚುರಾಚಂದ್‌ಪುರದ ಸಿಂಘತ್ ವಿಧಾನಸಭಾ ಕ್ಷೇತ್ರದಲ್ಲೂ ಮತದಾನದ ಹಿಂಸಾಚಾರ ವರದಿಯಾಗಿದೆ. ಅಣಕು ಮತದಾನದ ಪರೀಕ್ಷೆಯ ವೇಳೆ ಬಿಜೆಪಿ ಮತ್ತು ಕೆಪಿಎ ನಡುವೆ ಘರ್ಷಣೆ ನಡೆದಿದೆ. ಇದರಿಂದ ಇವಿಎಂ ನಿಯಂತ್ರಣ ಘಟಕಕ್ಕೆ ಹಾನಿಯಾಗಿದ್ದು, ಚುನಾವಣಾಧಿಕಾರಿಯು ಅಸಲಿ ಮತದಾನಕ್ಕಾಗಿ ಬ್ಯಾಕಪ್ ಇವಿಎಂ ತರಿಸಿಕೊಂಡರೆಂದು ತಿಳಿದುಬಂದಿದೆ. ಎರಡೂ ಘಟನೆಗಳು ಬೆಳಿಗ್ಗೆ 9:30 ರ ಸುಮಾರಿಗೆ ವರದಿಯಾಗಿದೆ.
WAR BREAKING: ಉಕ್ರೇನ್-ರಷ್ಯಾ ಶಾಂತಿ ಮಾತುಕತೆಗೆ ಸಮಯ ಫಿಕ್ಸ್; ಒಪ್ಪಂದಕ್ಕೆ ಬರುವ ವಿಶ್ವಾಸವಿದೆ ಎಂದ ರಷ್ಯಾ
ಕೀಯಾರೊದಲ್ಲಿ ಕಲ್ಲು ತೂರಾಟ ಮತ್ತು ಗುಂಡಿನ ದಾಳಿಯಂತಹ ಗಂಭೀರ ಘಟನೆಯು, ಕೀರಾವೊದ ಮತದಾನ ಕೇಂದ್ರವಾದ, ಫುನಾಲ್ ಮರಿಂಗ್ ಮತಗಟ್ಟೆಯಲ್ಲಿ ಸಂಭವಿಸಿದೆ. ಆದರೆ ಈ ಘಟನೆಯಿಂದ ಯಾರಿಗು ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ.
ನ್ಯೂ ಕೀಥೆಲ್ಮಂಬಿಯಲ್ಲಿ ಬಿಜೆಪಿ ಕಾರ್ಯಕರ್ತರು ಇಡೀ ಬೂತ್ ವಶಪಡಿಸಿಕೊಂಡಿದ್ದಾರೆಂದು ಕಾಂಗ್ರೆಸ್ ಆರೋಪಿಸಿದೆ. ಅದರ ನಂತರ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆಸಿದರು. ಗುದ್ದಾಟದಲ್ಲಿ ತೊಡಗಿದ್ದ ಗುಂಪನ್ನು ಚದುರಿಸಲು ಭದ್ರತಾ ಪಡೆಗಳು ಖಾಲಿ ಗುಂಡಿನ ದಾಳಿ ನಡೆಸಬೇಕಾಯ್ತು. ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಚುನಾವಣಾ ಆಯೋಗ, ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆಂದು ತಿಳಿಸಿದೆ.