ಸಂಜೆ ಏನಾದರೂ ಸ್ನ್ಯಾಕ್ಸ್ ಇದ್ದರೆ ಖುಷಿಯಾಗುತ್ತದೆ. ಅಂಗಡಿಯಿಂದ ತಂದು ತಿನ್ನುವುದಕ್ಕಿಂತ ಮನೆಯಲ್ಲಿಯೇ ಏನಾದರೂ ಆರೋಗ್ಯಕರವಾದದ್ದನ್ನು ಮಾಡಿಕೊಂಡು ತಿಂದರೆ ಹಿತಕರವಾಗಿರುತ್ತದೆ. ಇಲ್ಲಿ ಮಟರ್ (ಬಟಾಣಿ) ದೋಕ್ಲಾ ಮಾಡುವ ವಿಧಾನ ಇಲ್ಲಿದೆ ನೋಡಿ.
ಬೇಕಾಗುವ ಸಾಮಗ್ರಿಗಳು:
1 ಕಪ್ – ಹಸಿ ಬಟಾಣಿ, 1.5 ಕಪ್ ಕಡಲೆಹಿಟ್ಟು, 4 ಟೇಬಲ್ ಸ್ಪೂನ್ – ಚಿರೋಟಿ ರವೆ, 1 ಟೀ ಸ್ಪೂನ್ – ಶುಂಠಿ – ಹಸಿಮೆಣಸಿನ ಪೇಸ್ಟ್, 2 ಟೇಬಲ್ ಸ್ಪೂನ್ – ಮೊಸರು, ½ ಕಪ್ – ನೀರು, 1.5 ಟೀ ಸ್ಪೂನ್ – ಫ್ರೂಟ್ ಸಾಲ್ಟ್, 2 ಟೀ ಸ್ಪೂನ್ – ಎಣ್ಣೆ, ಉಪ್ಪು – ರುಚಿಗೆ ತಕ್ಕಷ್ಟು, ಸ್ವಲ್ಪ – ಕೊತ್ತಂಬರಿಸೊಪ್ಪು, ಸ್ವಲ್ಪ – ತೆಂಗಿನತುರಿ.
ಪದೇ ಪದೇ ಸಿಹಿ ತಿನ್ನಬೇಕೆಂದು ಬಯಸಲು ಕಾರಣವೇನು ಗೊತ್ತಾ….?
ಮಾಡುವ ವಿಧಾನ:
ಮೊದಲು ಮಿಕ್ಸಿ ಜಾರಿಗೆ ಬಟಾಣಿ ಕಾಳು ಹಾಕಿ ಸ್ವಲ್ಪ ನೀರು ಸೇರಿಸಿ ರುಬ್ಬಿಕೊಂಡು ಒಂದು ಬೌಲ್ ಗೆ ಹಾಕಿ. ನಂತರ ಅದಕ್ಕೆ ಕಡಲೆಹಿಟ್ಟು, ರವೆ, ಉಪ್ಪು, ಶುಂಠಿ-ಹಸಿಮೆಣಸಿನ ಪೇಸ್ಟ್, ಮೊಸರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಆಮೇಲೆ ಫ್ರೂಟ್ ಸಾಲ್ಟ್ ಹಾಕಿ ಮಿಕ್ಸ್ ಮಾಡಿ ಸ್ವಲ್ಪ ನೀರು ಹಾಕಿಕೊಂಡು ಮಿಕ್ಸ್ ಮಾಡಿ ಇದನ್ನು ಇಡ್ಲಿ ತಟ್ಟೆಗೆ ಹಾಕಿ ಆವಿಯಲ್ಲಿ 15 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ಇದು ತುಸು ತಣ್ಣಗಾದ ಮೇಲೆ ತೆಗೆದುಕೊಂಡು ಇದರ ಮೇಲೆ ತೆಂಗಿನತುರಿ, ಕೊತ್ತಂಬರಿ ಸೊಪ್ಪು ಹಾಕಿ ಅಲಂಕರಿಸಿದರೆ ರುಚಿಯಾದ ದೋಕ್ಲಾ ಸವಿಯಲು ಸಿದ್ಧ.