ಮಚ್ಚೆ ಅಥವಾ ಸಣ್ಣ ಕಪ್ಪು ಚುಕ್ಕೆಗಳು (ಎಳ್ಳು) ಒಂದು ಚರ್ಮ ರೋಗ. ಒಂದು ವೇಳೆ ಸಣ್ಣ ಸಣ್ಣ ಚುಕ್ಕೆಗಳು ದೊಡ್ಡದಾಗ್ತಾ ಹೋದ್ರೆ ಎಚ್ಚೆತ್ತುಕೊಳ್ಳುವ ಅವಶ್ಯಕತೆಯಿದೆ. ಇದು ಗಂಭೀರ ಸೋಂಕನ್ನು ಸೂಚಿಸುತ್ತದೆ. ಮಚ್ಚೆ ಅಥವಾ ಕಪ್ಪು ಚುಕ್ಕೆಗಳು ದೊಡ್ಡದಾಗ್ತಿದ್ದರೆ ಅದು HPV ಸೋಂಕಿಗೆ ಕಾರಣವಾಗುತ್ತದೆ.
ಸಾಮಾನ್ಯವಾಗಿ ಗುಪ್ತಾಂಗಗಳು, ಕೈಗಳು, ಬೆರಳುಗಳು, ಮೊಣಕೈಗಳು ಮುಂತಾದ ಕೆಲವು ಭಾಗಗಳಲ್ಲಿ ಮಚ್ಚೆಗಳು ಹೆಚ್ಚಾಗಿ ಕಂಡುಬರುತ್ತದೆ. ಗಂಭೀರ ವಿಷಯವೆಂದರೆ HPV ಸೋಂಕು ಹೆಚ್ಚಾದರೆ, ಅದು ಕ್ಯಾನ್ಸರ್ ಗೆ ಕಾರಣವಾಗಬಹುದು. HPV ಹ್ಯೂಮನ್ ಪ್ಯಾಪಿಲೋಮಾ 150 ಕ್ಕಿಂತ ಹೆಚ್ಚು ವೈರಸ್ಗಳ ಗುಂಪಾಗಿರುತ್ತದೆ. HPV ವೈರಸ್ ಹೆಚ್ಚಾಗ್ತಿದ್ದಂತೆ ಮಚ್ಚೆ ಬೆಳೆಯಲು ಶುರುವಾಗುತ್ತದೆ. ಪುರುಷರು ಈ ರೋಗಕ್ಕೆ ಹೆಚ್ಚು ಒಳಗಾಗುತ್ತಾರೆ.
ಈ ರೋಗದಿಂದಾಗಿ ಗುಪ್ತಾಂಗದಲ್ಲಿ ಅಥವಾ ಸುತ್ತಮುತ್ತಲಿನ ಪ್ರದೇಶದ ಮಚ್ಚೆಗಳು ದೊಡ್ಡದಾಗಲು ಶುರುವಾಗುತ್ತವೆ. ಸಲಿಂಗಕಾಮಿ ಪುರುಷರಲ್ಲಿ ಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇದು ಮುಂದೆ ದೊಡ್ಡ ಸಮಸ್ಯೆಗೆ ಕಾರಣವಾಗಬಹುದು. ಅನೇಕ ಕ್ಯಾನ್ಸರ್ ಗೆ ಇದು ಮೂಲವಾಗುತ್ತದೆ. ಗಾಯ ಅಥವಾ ಚರ್ಮ ಕತ್ತರಿಸಿದ್ದರೆ ಅದ್ರ ಮೂಲಕ ವೈರಸ್ ದೇಹ ಪ್ರವೇಶ ಮಾಡುತ್ತದೆ. ಗುಪ್ತಾಂಗದಲ್ಲಿರು ವೈರಸ್ ಸಂಗಾತಿ ದೇಹ ಸೇರುವ ಸಾಧ್ಯತೆಯಿರುತ್ತದೆ. ಮಚ್ಚೆ ದೊಡ್ಡದಾಗ್ತಿದ್ದರೆ ತಕ್ಷಣ ಚಿಕಿತ್ಸೆ ಪಡೆಯಿರಿ. ಸಾಮಾನ್ಯವಾಗಿ 11-12 ನೇ ವಯಸ್ಸಿನಲ್ಲಿ ಇದಕ್ಕೆ ಲಸಿಕೆ ಹಾಕಲಾಗುತ್ತದೆ.