ರೌಡಿಗಳು, ದರೋಡೆಕೋರರು ಮಚ್ಚು ಹಿಡಿದು ಓಡಾಡೋದನ್ನು ನೋಡಿರ್ತೀರಾ. ಆದ್ರೆ ಅಸ್ಸಾಂನ ಕ್ಯಾಚಾರ್ ಜಿಲ್ಲೆಯಲ್ಲಿ ಮುಖ್ಯ ಶಿಕ್ಷಕನೊಬ್ಬ ಮಚ್ಚು ಹಿಡಿದುಕೊಂಡು ಶಾಲೆಗೆ ಬಂದಿದ್ದಾನೆ. ಆತನ ವಿಡಿಯೋ ಕೂಡ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ.
38 ವರ್ಷದ ಧೃತಿಮೇಧ ದಾಸ್, ಸಿಲ್ಚಾರ್‌ನ ತಾರಾಪುರ ಪ್ರದೇಶದ ನಿವಾಸಿ. ರಾಧಾಮಧಾಬ್ ಬುನಿಯಾಡಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 11 ವರ್ಷಗಳಿಂದ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದಾನೆ.
ಶನಿವಾರ ಪೊಲೀಸರಿಗೆ ಶಾಲೆಯಿಂದ ಕರೆ ಬಂದಿತ್ತು. ಶಿಕ್ಷಕ ಮಚ್ಚು ಹಿಡಿದುಕೊಂಡು ಓಡಾಡುತ್ತಿರುವುದಾಗಿ ಮಾಹಿತಿ ಸಿಕ್ಕಿತ್ತು. ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಅನುಚಿತ ವರ್ತನೆ ತೋರಿದ ಶಿಕ್ಷಕ ಧೃತಿಮೇಧ ದಾಸ್‌ನನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಆದ್ರೆ ಯಾರೂ ಅಧಿಕೃತವಾಗಿ ದೂರು ನೀಡದ ಕಾರಣ ಆತನನ್ನು ಪೊಲೀಸರು ಬಂಧಿಸಿಲ್ಲ. ಶಾಲೆಯ ಇತರ ಸಹ ಶಿಕ್ಷಕರು ಅಶಿಸ್ತು ತೋರುತ್ತಿದ್ದರು, ನಿಯಮ ಪಾಲಿಸುತ್ತಿರಲಿಲ್ಲ. ಅವರಿಗೆ ಬುದ್ಧಿ ಕಲಿಸುವ ಸಲುವಾಗಿ ಮಚ್ಚು ತಂದಿದ್ದೆ ಅಂತಾ ಶಿಕ್ಷಕ ಸಮರ್ಥಿಸಿಕೊಂಡಿದ್ದಾನೆ.
https://youtu.be/jsgZXkPVRYY