alex Certify ಮಗು ಹುಟ್ಟಿದ ತಕ್ಷಣ ಜೋರಾಗಿ ಅಳುತ್ತದೆ, ಇದರ ಹಿಂದಿದೆ ಇಂಟ್ರೆಸ್ಟಿಂಗ್‌ ಕಾರಣ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗು ಹುಟ್ಟಿದ ತಕ್ಷಣ ಜೋರಾಗಿ ಅಳುತ್ತದೆ, ಇದರ ಹಿಂದಿದೆ ಇಂಟ್ರೆಸ್ಟಿಂಗ್‌ ಕಾರಣ…!

ಮಕ್ಕಳ ಜನನ ಹೆತ್ತವರ ಬದುಕಿನ ಅಮೂಲ್ಯ ಕ್ಷಣ. ಸಾಮಾನ್ಯವಾಗಿ ಶಿಶು ಹುಟ್ಟಿದ ತಕ್ಷಣ ಜೋರಾಗಿ ಅಳುತ್ತದೆ. ಈ ರೀತಿ ಮಕ್ಕಳು ಅಳಲು ವಿಶೇಷ ಕಾರಣವಿದೆ. ಮಗು ಜನಿಸಿದಾಗ ಈ ಮೊದಲು ಅನುಭವಿಸದ ಹೊಸ ವಾತಾವರಣವನ್ನು ಪ್ರವೇಶಿಸುತ್ತದೆ. ಇದರೊಂದಿಗೆ ಮಗುವಿನ ದೇಹದ ವ್ಯವಸ್ಥೆಗಳನ್ನು ಸಕ್ರಿಯಗೊಳಿಸಲು ಆಮ್ಲಜನಕ, ಪೋಷಕಾಂಶಗಳು ಮತ್ತು ತಾಪಮಾನದ ಅಗತ್ಯವಿರುತ್ತದೆ. ಅಳುವುದು ಈ ಅಗತ್ಯವನ್ನು ವ್ಯಕ್ತಪಡಿಸುವ ಒಂದು ಮಾರ್ಗವಾಗಿದೆ.

ವಾತಾವರಣದ ಪ್ರತಿಕ್ರಿಯೆಗಳ ಪರಿಣಾಮ

ಆರೋಗ್ಯ ತಜ್ಞರ ಪ್ರಕಾರ ಶಿಶು ಹುಟ್ಟಿದ ತಕ್ಷಣ ಹೊಸ ವಾತಾವರಣದಲ್ಲಿ ಹೊಸ ಅನುಭವಗಳನ್ನು ಪಡೆಯುತ್ತದೆ. ಇತರ ಪರಿಸರದ ಪ್ರತಿಕ್ರಿಯೆಗಳನ್ನು ಅಳುವಿನ ಮೂಲಕ ತೋರಿಸುತ್ತದೆ. ಶೀತ, ಶಾಖ, ಸಂತೋಷ, ದುಃಖ, ಹಸಿವು, ಆಯಾಸ, ಅಸಮತೋಲನ, ಭಯ, ಹಠಾತ್ ಗಮನ ಬದಲಾವಣೆ ಹೀಗೆ ಹಲವು ಕಾರಣಗಳು ಮಗುವಿನ ಅಳುವಿನ ಹಿಂದಿವೆ. ನವಜಾತ ಮಕ್ಕಳ ಗಮನವು ಕಾಲಕಾಲಕ್ಕೆ ಕಿರಿದಾಗುತ್ತದೆ ಮತ್ತು ಅವರು ಅಳಲು ಪ್ರಾರಂಭಿಸುತ್ತಾರೆ.

ಶಿಶು ಹುಟ್ಟಿದಾಕ್ಷಣ ಅಳಲು ಇತರ ಕಾರಣಗಳು

ಹುಟ್ಟಿದ ಕೂಡಲೇ ಮಗು ಹಸಿವಿನಿಂದ ಅಳಬಹುದು. ಕೆಲವೊಮ್ಮೆ ಹಾಲು ಕುಡಿಸಿದಾಕ್ಷಣ ಸುಮ್ಮನಾಗುತ್ತದೆ. ಜನನದ ನಂತರ ಮೂರು ತಿಂಗಳವರೆಗೆ ಮಗುವಿಗೆ ಪ್ರತಿ ಗಂಟೆಗೆ ಹಸಿವು ಉಂಟಾಗುತ್ತದೆ. ಹಸಿವಾಗಿದೆ ಎಂಬುದನ್ನು ಮಗು ಅಳುವಿನ ಮೂಲಕ ವ್ಯಕ್ತಪಡಿಸುತ್ತದೆ. ಆರು ತಿಂಗಳ ನಂತರ ಮಕ್ಕಳು ತಾವಾಗಿಯೇ ಮಲಗಲು ಕಲಿಯುತ್ತಾರೆ, ಆದರೆ ಕೆಲವೊಮ್ಮೆ ತಾಯಿ ಅಥವಾ ತಂದೆ ಇಲ್ಲದೆ ಮಲಗುವುದಿಲ್ಲ.

ಆರೋಗ್ಯದ ಸಂಕೇತ

ನವಜಾತ ಶಿಶುವಿಗೆ ದಿನಕ್ಕೆ ಎರಡರಿಂದ ಮೂರು ಗಂಟೆಗಳ ಕಾಲ ಅಳುವುದು ಅವಶ್ಯಕ ಎಂದು ಸಹ ನಂಬಲಾಗಿದೆ. ಅನೇಕ ಸ್ಥಳಗಳಲ್ಲಿ ಮಗುವಿನ ಅಳುವಿಕೆಯನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಮಗು ಅತ್ತರೆ ಅದು ಆರೋಗ್ಯಕರವಾಗಿದೆ ಎಂಬ ಸೂಚನೆಯಂತೆ. ಮಗು ಜನನದ ನಂತರ ಜೋರಾಗಿ ಅತ್ತರೆ ಅದು ಸಂಪೂರ್ಣ ಆರೋಗ್ಯಕರವಾಗಿದೆ ಎಂದು ಅರ್ಥಮಾಡಿಕೊಳ್ಳಿ. ಮಗು ನಿಧಾನವಾಗಿ ಅತ್ತರೆ ಅದಕ್ಕೆ ಆರೋಗ್ಯ ಸಮಸ್ಯೆಗಳಿರಬಹುದು ಎಂದರ್ಥ.  ಇದಲ್ಲದೆ ಅನೇಕ ಬಾರಿ ಮಕ್ಕಳು ಜ್ವರ, ನೋವು ಅಥವಾ ಇತರ ಕಾರಣಗಳಿಂದ ಅಳಲು ಪ್ರಾರಂಭಿಸುತ್ತಾರೆ. ಅಳುವುದು ಅವರ ಗಮನವನ್ನು ಸೆಳೆಯಲು ಮತ್ತು ಅವರ ಅಗತ್ಯಗಳನ್ನು ಪೂರೈಸಲು ಪೋಷಕರನ್ನು ಎಚ್ಚರಿಸುವ ಒಂದು ಮಾರ್ಗವಾಗಿದೆ.

ಸಾಮಾನ್ಯ ಬೆಳವಣಿಗೆ ಪ್ರಕ್ರಿಯೆ

ಕಾಲಾನಂತರದಲ್ಲಿ ಅಳುವುದು ಕಡಿಮೆಯಾಗುತ್ತದೆ. ಏಕೆಂದರೆ ಶಿಶುಗಳು ಭಾಷೆ ಮತ್ತು ಸಾಮಾಜಿಕ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳುತ್ತವೆ. ಹೊಸ ಹೊಸದನ್ನು ಕಲಿತುಕೊಂಡು ತಮ್ಮ ಅಗತ್ಯಗಳನ್ನು ವ್ಯಕ್ತಪಡಿಸಲು ಇತರ ಮಾರ್ಗಗಳನ್ನು ಕಂಡುಕೊಳ್ಳಬಹುದು.ಇದು ಸಾಮಾನ್ಯ ಬೆಳವಣಿಗೆಯ ಪ್ರಕ್ರಿಯೆಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...