
ಮಾಸ್ಕ್ ಅಂದಾಕ್ಷಣ ನಮಗೆ ನೆನಪಾಗೋದು ಕೊರೊನಾ ವೈರಸ್. ಕೊರೊನಾ ವೈರಸ್ ಭಯಕ್ಕೆ ಎಲ್ಲರೂ ಮಾಸ್ಕ್ ಹಾಕಿಕೊಳ್ಳುವುದು ಕಡ್ಡಾಯವಾಗಿದೆ. ಆದರೆ ಕಳೆದ ಕೆಲ ತಿಂಗಳ ಹಿಂದಷ್ಟೆ ಮಾಸ್ಕ್ ಕಡ್ಡಾಯ ಅನ್ನೋ ನಿಯಮವನ್ನ ತೆಗೆದು ಹಾಕಲಾಗಿದೆ. ಆದರೂ ಮಗುವೊಂದು ಸರ್ಜಿಕಲ್ ಮಾಸ್ಕ್‌ನಿಂದ ತನ್ನ ಮುಖವನ್ನೇ ಕವರ್ ಮಾಡಿಕೊಂಡಿದ್ದನ್ನ ಇಲ್ಲಿ ನೋಡಬಹುದಾಗಿದೆ. (UNI) ಏರ್ ನ್ಯೂಜಿಲೆಂಡ್ ವಿಮಾನದಲ್ಲಿ, ಜುಲೈ 1ರಂದು ಆಕ್ಲೆಂಡ್‌ನಿಂದ ವೆಲ್ಲಿಂಗ್ ಟನ್ ದೇಶಿಯ ವಿಮಾನದಲ್ಲಿ ಹೀಗೆ ನೋಡಲು ಸಿಕ್ಕ ಮಗುವನ್ನ, ಅದೇ ಫ್ಲೈಟ್‌ನಲ್ಲಿ ಪ್ರಯಾಣಿಸುತ್ತಿದ್ದ ಓರ್ವ ವ್ಯಕ್ತಿ ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಕ್ಲಿಕ್ ಮಾಡಿದ್ದಾರೆ. ವಿಶೇಷ ಏನಂದರೆ ಈ ಮಾಸ್ಕ್‌ನಲ್ಲಿ ಎರಡು ರಂಧ್ರಗಳನ್ನ ಮಾಡಿದ್ದು, ಮಗು ಅದೇ ರಂಧ್ರದಿಂದ ಅಲ್ಲಿದ್ದವರನ್ನ ಬೆರಗುಗಣ್ಣಿನಿಂದ ನೋಡುತ್ತಿತ್ತು.
ಜಾಂಡರ್ ಒಪ್ಪರ್‌ಮ್ಯಾನ್ ಅನ್ನುವರು ಈ ಮಗುವಿನ ಫೋಟೋ ಕ್ಲಿಕ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋವನ್ನ ಹಂಚಿಕೊಂಡಿದ್ದಾರೆ. ಇದಕ್ಕೆ ‘ಸೂಪರ್ ಸ್ವೀಟ್ ಸಂವಹನ‘ ಅನ್ನೋ ಕ್ಯಾಪ್ಷನ್ ಕೊಟ್ಟಿದ್ದಾರೆ. ಈ ಫೋಟೋ ಹಂಚಿಕೊಂಡಿದ್ದಾಗಿನಿಂದ ಭಿನ್ನ-ಭಿನ್ನ ಅಭಿಪ್ರಾಯಗಳು ಕೇಳಿ ಬರ್ತಿದೆ. ಜೊತೆಗೆ ಚರ್ಚೆಗೆ ಕಾರಣ ಕೂಡ ಆಗ್ತಿದೆ. ಕೆಲವರು ಈ ಫೋಟೋ ನೋಡಿ ಇದು ಮುದ್ದಾದ ಫೋಟೋ ಅಂತ ಹೇಳಿದರೆ, ಇನ್ನೂ ಕೆಲವರು ಹಾರರ್ ಸಿನೆಮಾಗಳಲ್ಲಿ ಕಾಣುವ ದೆವ್ವದ ಪಾತ್ರಗಳಿಗೆ ಮಗುವಿನ ಫೋಟೋವನ್ನ ಹೋಲಿಸುತ್ತಿದ್ದಾರೆ. ಕೆಲವರಂತೂ ಇದು ಮಕ್ಕಳನ್ನ ನಿಂದಿಸುವ ಹಾಗಿದೆ ಅಂತ ಕಾಮೆಂಟ್ ಹಾಕಿದ್ದಾರೆ.
ಎಲ್ಲರೂ ಅವರವರ ಅಭಿಪ್ರಾಯಗಳನ್ನ ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲಿ ಒಬ್ಬರಂತೂ ನಾನು ಆ ವಿಮಾನದಲ್ಲಿ ಇದ್ದಿದ್ದೇ ಆದ್ರೆ ಆ ಮಾಸ್ಕ್‌ನ್ನ ತೆಗೆದು ಹಾಕುತ್ತಿದ್ದೆ ಅಂತ ಹೇಳಿದ್ಧಾರೆ. ಅದೇ ರೀತಿ ಇನ್ನೊಬ್ಬ ನೆಟ್ಟಿಗ ಹೀಗೆ ಮಾಡುವುದರಿಂದ ಮಗುವಿಗೆ ಉಸಿರಾಟದ ಸಮಸ್ಯೆ ಉಂಟಾಗುತ್ತೆ ಅಂತ ಹೇಳಿದ್ಧಾರೆ.
ನ್ಯೂಜಿಲೆಂಡ್ ಸರ್ಕಾರದ ಪ್ರಕಾರ 12 ವರ್ಷ ಮೇಲ್ಪಟ್ಟ ಎಲ್ಲಾ ವಿಮಾನ ಪ್ರಯಾಣಿಕರು ದೇಶೀಯ ವಿಮಾನಗಳಲ್ಲಿ ಫೇಸ್ ಮಾಸ್ಕ್ ಹಾಕಿಕೊಳ್ಳಬೇಕು ಅನ್ನೋ ನಿಯಮವಿದೆ. ಇದೇ ನಿಯಮ ಪಾಲಿಸುತ್ತಿರುವ ಜನರು ಈಗ ಮಗುವಿಗೆ ಸುರಕ್ಷತೆ ದೃಷ್ಟಿಯಿಂದ ಈ ರೀತಿ ಮಾಸ್ಕ್ ಹಾಕಿರಬಹುದು ಅಂತ ಅಂದಾಜು ಮಾಡಲಾಗಿದೆ. ಆದರೆ ಹೀಗೆ ಮಾಸ್ಕ್ ಹಾಕುವುದರಿಂದ ಮಗುವಿನ ಉಸಿರಾಟಕ್ಕೆ ತೊಂದರೆ ಆಗುತ್ತೆ ಅನ್ನೋದನ್ನ ಪಾಲಕರು ಮರೆತಿರೊ ಹಾಗಿದೆ, ಅಂತ ಕೂಡಾ ಕೆಲವರು ಹೇಳಿದ್ಧಾರೆ.