ಮುದ್ದು ಕಂದನಿಗೊಂದು ಚೆಂದದ ಹೆಸರಿಡುವ ದಿನವೇ ನಾಮಕರಣ. ಪುಟಾಣಿ ಮೊದಲ ಬಾರಿಗೆ ತನ್ನ ಹೆಸರು ಕೇಳಿಸಿಕೊಳ್ಳುವ ದಿನ. ಇನ್ನೂ ಈ ನಾಮಕರಣಗಳಿಗೆ ಹೋಗುವಾಗ ಯಾವ ಉಡುಗೊರೆ ನೀಡಬೇಕು ಅನ್ನೋ ಗೊಂದಲ ಸಾಮಾನ್ಯವಾಗಿ ಇದ್ದೇ ಇರುತ್ತದೆ. ಚಿನ್ನ, ಬೆಳ್ಳಿಯ ವಸ್ತುಗಳಷ್ಟೇ ಅಲ್ಲದೇ ಕ್ಯೂಟ್ ಆದ ಗಿಫ್ಟ್ಗಳನ್ನು ನೀಡಬಹುದು. ಹಾಗಾದ್ರೆ ಯಾವೆಲ್ಲಾ ಗಿಫ್ಟ್ ನೀಡಬಹುದು ಅನ್ನೋದನ್ನ ನೋಡೋಣ ಬನ್ನಿ.
ಫ್ಯಾನ್ಸಿ ಹೆಡ್ವೇರ್ ಆಕ್ಸೆಸರೀಸ್ : ಹೆಣ್ಣು ಮಗುವಾದರೆ ಚೆಂದದ ಹೆಡ್ಬ್ಯಾಂಡ್, ಹೇರ್ ಕ್ಲಿಪ್, ಬೇಬಿ ಹೇರ್ಪಿನ್ಸ್ ನೀಡಬಹುದು. ಕ್ರೌನ್, ಸ್ಟಾರ್ ಕ್ಲಿಪ್ಸ್ ಇವೆಲ್ಲಾ ಮುದ್ದಾಗಿ ಕಾಣುತ್ತವೆ.
ಕಸ್ಟಮೈಸ್ಡ್ ನೇಮ್ ಎಂಬ್ರಾಯಿಡರಿ : ಸದ್ಯ ಹೆಚ್ಚು ಟ್ರೆಂಡ್ನಲ್ಲಿರುವ ಗಿಫ್ಟ್ ಇದಾಗಿದೆ. ಮಗುವಿನ ಅಡ್ಡ ಹೆಸರನ್ನು ಎಂಬ್ರಾಯಿಡರಿ ಮಾಡಿಸಿ ಕೊಡಬಹುದು. ಈ ಪ್ಲೇಟ್ ಅನ್ನು ಗೋಡೆಯ ಮೇಲೆ ತೂಗು ಹಾಕಿದರೆ ಮನೆಯಲ್ಲೊಂದು ಮಮತೆಯ ಭಾವ ಹೊಮ್ಮುತ್ತದೆ.
ಫ್ಯಾಮಿಲಿ ಕ್ಯಾರಿಕೇಚರ್ : ತಂದೆ, ತಾಯಿ ಮತ್ತು ಮಗುವಿನ ಫೋಟೋ ಬಳಸಿ ಕ್ಯೂಟ್ ಫ್ಯಾಮಿಲಿ ಎನ್ನುವಂತೆ ಕ್ಯಾರಿಕೇಚರ್ ಮಾಡಿಸಬಹುದು. ಮರದ ಸ್ಟ್ಯಾಂಡ್, ಪೇಪರ್ ಸ್ಟ್ಯಾಂಡ್ ಸೇರಿದಂತೆ ವಿವಿಧ ಅಳತೆಯಲ್ಲಿ ಇವು ಲಭ್ಯವಿದೆ.
ಬೇಬಿ ಮೌಲ್ಡ್ : ಮಗುವಿನ ಕೈ, ಕಾಲುಗಳ ಗುರುತನ್ನು ಮೌಲ್ಡ್ ಮಾಡಿಸಿ ಅದನ್ನು ಸಹ ಉಡುಗೊರೆಯಾಗಿ ನೀಡಬಹುದು.
ಮೈ ಡೈರಿ : ಮಗುವಿನೊಟ್ಟಿಗೆ ನೀವು ಕಳೆದ ಕ್ಷಣಗಳನ್ನು ಬರವಣಿಗೆ ಮೂಲಕ ದಾಖಲಿಸಿ ಪುಟ್ಟ ಡೈರಿಯೊಂದನ್ನು ನೀಡಬಹುದು. ಮಗು ಬೆಳೆದಂತೆ ಅದನ್ನು ಓದಲು ಆರಂಭಿಸಿದಾಗ ನಿಮ್ಮ ಮೇಲೆ ವಿಶೇಷ ಒಲವು ಮೂಡುತ್ತದೆ. ಜೀವನ ಪೂರ್ತಿ ಮಗುವಿನ ದೃಷ್ಟಿಯಲ್ಲಿ ನೀವು ವಿಶೇಷ ವ್ಯಕ್ತಿಯಾಗಿರುತ್ತೀರಿ.