ತುಮಕೂರು: ಪತಿಯ ಹಿಂಸೆ, ಕಿರುಕುಳಕ್ಕೆ ಬೇಸತ್ತ ಮಹಿಳೆ ತನ್ನ 2 ವರ್ಷದ ಮಗುವಿನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು, ಮಗು ಸಾವನ್ನಪ್ಪಿರುವ ದಾರುಣ ಘಟನೆ ತುಮಕೂರಿನ ಚಿಕ್ಕನಾಯಕನಹಳ್ಳಿ ಕೆಂಕೆರೆ ಗ್ರಾಮದಲ್ಲಿ ನಡೆದಿದೆ.
2 ವರ್ಷದ ರೂಪಾ ಮೃತ ಕಂದಮ್ಮ. ತಾಯಿ ಪ್ರೇಮ ಬದುಕುಳಿದಿದ್ದಾಳೆ. ಪತಿ ಜಗದೀಶ್ ಕಿರುಕುಳಕ್ಕೆ ಬೆಸತ್ತ ಪ್ರೇಮಾ ಮಗುವಿನೊಂದಿಗೆ ಬಾವಿಗೆ ಹಾರಿದ್ದಾಳೆ. ಶಬ್ದ ಕೇಳುತ್ತಿದ್ದಂತೆ ಅಕ್ಕಪಕ್ಕದ ಮನೆಯವರು ಬಂದು ನೋಡಿದ್ದಾರೆ. ತಕ್ಷಣ ಇಬ್ಬರ ರಕ್ಷಣೆಗೆ ಮುಂದಾಗಿದ್ದಾರೆ.
ಆದರೆ ಮಗು ನೀರಿನಲ್ಲಿ ಉಸಿರುಗಟ್ಟಿ ಬಾವಿಯಲ್ಲಿಯೇ ಮೃತಪಟ್ಟಿದೆ. ತಾಯಿಯನ್ನು ರಕ್ಷಿಸಿದ್ದಾರೆ. ಅಸ್ವಸ್ಥಳಾಗಿರುವ ತಾಯಿ ಪ್ರೇಮಾಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.