ಮಗುವಿನ ದೇಹ ಮತ್ತು ಕೂದಲಿನ ಬೆಳವಣೆಗೆಗಾಗಿ ಎಣ್ಣೆ ಮಸಾಜ್ ಅನ್ನು ಮಾಡುತ್ತಾರೆ. ಆದರೆ ಕೆಲವು ಎಣ್ಣೆಯನ್ನು ಎಲ್ಲಾ ಸಮಯದಲ್ಲಿ ಮಗುವಿಗೆ ಹಚ್ಚಿದರೆ ಅದರಿಂದ ಹಾನಿಯಾಗುವ ಸಂಭವವಿದೆ.
ಹಾಗಾಗಿ ಯಾವ ಋತುವಿನಲ್ಲಿ ಮಗುವಿಗೆ ಯಾವ ಎಣ್ಣೆಯಿಂದ ಮಸಾಜ್ ಮಾಡಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳಿ.
ಬೇಸಿಗೆಯಲ್ಲಿ ವಾತಾವರಣ ತುಂಬಾ ಬಿಸಿಯಾಗಿರುವುದರಿಂದ ತೆಂಗಿನೆಣ್ಣೆಯಿಂದ ಮಸಾಜ್ ಮಾಡಿ. ಇದರಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಮಗುವಿನ ಚರ್ಮಕ್ಕ ತುಂಬಾ ಒಳ್ಳೆಯದು. ಬೇಸಿಗೆಯಲ್ಲಿ ಕಾಡುವ ಸ್ಕಿನ್ ಅಲರ್ಜಿಯಿಂದ ಮಗುವನ್ನು ಕಾಪಾಡುತ್ತದೆ.
ಚಳಿಗಾಲ ಮತ್ತು ಮಳೆಗಾಲದಲ್ಲಿ ಆಲಿವ್ ಆಯಿಲ್ ಬಳಸಿ. ಇದು ಚರ್ಮವನ್ನು ಮೃದುವಾಗಿಡಲು ಸಹಕರಿಸುತ್ತದೆ. ಹಾಗೇ ಸಾಸಿವೆ ಎಣ್ಣೆಯನ್ನು ಇತರ ಎಣ್ಣೆಯೊಂದಿಗೆ ಮಿಕ್ಸ್ ಮಾಡಿ ಮಗುವಿಗೆ ಹಚ್ಚಿದರೆ ಶೀತ ವಾತಾವರಣದಿಂದಾಗುವ ಸಮಸ್ಯೆಗಳಿಂದ ಮಗುವನ್ನು ಕಾಪಾಡಬಹುದು.
ಅಲ್ಲದೇ ಬಾದಾಮಿ ಎಣ್ಣೆಯಲ್ಲಿ ವಿಟಮಿನ್ ಇ ಸಮೃದ್ಧವಾಗಿರುವುದರಿಂದ ಈ ಎಣ್ಣೆಯನ್ನು ಎಲ್ಲಾ ಋತುವಿನಲ್ಲಿಯೂ ಮಗುವಿಗೆ ಬಳಸಬಹುದು.