ಮಗುವಿಗೆ ಆರು ತಿಂಗಳು ಆದ ಬಳಿಕ ಎದೆಹಾಲಿನ ಜತೆಜತೆಗೆ ಬೇರೆ ಆಹಾರವನ್ನು ಪರಿಚಯಿಸಬೇಕಾಗುತ್ತದೆ. ಇದರಿಂದ ಮಗುವಿನ ತೂಕ ಹಾಗೂ ಬೆಳವಣಿಗೆಗೆ ಸಹಾಯಕವಾಗುತ್ತದೆ. ಹಾಗಂತ ದೊಡ್ಡವರು ತಿನ್ನುವ ಆಹಾರವನ್ನು ಅವರಿಗೆ ನೀಡುವುದಕ್ಕೆ ಆಗುವುದಿಲ್ಲ. ಸೂಪ್ ರೀತಿ ಮಾಡಿಕೊಟ್ಟರೆ ಅವರಿಗೆ ಕುಡಿಯುವುದಕ್ಕೆ ತುಂಬಾ ಸುಲಭವಾಗುತ್ತದೆ. ಜತೆಗೆ ಅವರ ಆರೋಗ್ಯಕ್ಕೂ ಒಳ್ಳೆಯದು. ಇಲ್ಲಿ ಸುಲಭವಾಗಿ ಮಾಡಬಹುದಾದ ಬೇಳೆ ಸೂಪ್ ಇದೆ. ಟ್ರೈ ಮಾಡಿ.
ಬೇಕಾಗುವ ಸಾಮಗ್ರಿಗಳು:
ತೊಗರಿ ಬೇಳೆ – 2 ಟೇಬಲ್ ಸ್ಪೂನ್, ನೀರು – 1/2 ಕಪ್, ಜೀರಿಗೆ – 1/4 ಟೀ ಸ್ಪೂನ್, ಇಂಗು – ಚಿಟಿಕೆ, ಅರಿಶಿನ – 1/8 ಟೀ ಸ್ಪೂನ್.
ಮಾಡುವ ವಿಧಾನ:
ತೊಗರಿಬೇಳೆಯನ್ನು ಚೆನ್ನಾಗಿ ತೊಳೆದು ನಂತರ ನೀರನ್ನು ಬಸಿದುಕೊಂಡು ಒಂದು ಕುಕ್ಕರ್ ಗೆ ಹಾಕಿ ಅದಕ್ಕೆ ½ ಕಪ್ ನೀರು, ಇಂಗು, ಜೀರಿಗೆ, ಅರಿಶಿನ ಹಾಕಿ 5 ವಿಷಲ್ ಕೂಗಿಸಿಕೊಳ್ಳಿ.
ಇದು ತಣ್ಣಗಾದ ಮೇಲೆ ಚೆನ್ನಾಗಿ ಮಸೆಯಿರಿ. ನಂತರ ಇದರ ನೀರನ್ನು ಸೋಸಿಕೊಳ್ಳಿ. ಇದನ್ನು ಮಗುವಿಗೆ ಕುಡಿಸಿ. ಯಾವುದೇ ಕಾರಣಕ್ಕೂ ಇದನ್ನು ತುಂಬಾ ಹೊತ್ತು ಹಾಗೆಯೇ ಇಡಬೇಡಿ. ಮಾಡಿದ ತಕ್ಷಣ ಮಗುವಿಗೆ ಕುಡಿಸಿ.