ಮನೆಗೊಂದು ಮಗು ಬಂದ ಮೇಲೆ ಅಮ್ಮನಾದವಳ ಸೌಂದರ್ಯದ ಕಾಳಜಿ ಕಡಿಮೆಯಾಗುತ್ತದೆ. ಮಗುವಿನ ಅರೈಕೆಯಲ್ಲೇ ಹೆಚ್ಚಿನ ಸಮಯ ಕಳೆಯುವ ಅಕೆಗೆ ತನ್ನ ಬಗ್ಗೆ ಅಲೋಚನೆ ಮಾಡಲೂ ಸಮಯವಿರುವುದಿಲ್ಲ.
ಹಾಗಾಗಿ ಸಿಗುವ ಸ್ವಲ್ಪ ಸಮಯದಲ್ಲೇ ತನ್ನನ್ನೇ ತಾನು ಹೇಗೆ ನೋಡಿಕೊಳ್ಳಬಹುದು.
ಬೆಳಿಗ್ಗೆ ಎದ್ದಾಕ್ಷಣ ಮುಖಕ್ಕೆ ಐಸ್ ಪ್ಯಾಕ್ ಹಚ್ಚಿಕೊಳ್ಳಿ. ರಾತ್ರಿ ನಿದ್ದೆ ಬರದಿದ್ದರೆ ಅಥವಾ ಹೆಚ್ಚು ಮಲಗಿದ್ದರೆ ಮುಖದಲ್ಲಿ ಕಾಣುವ ಸುಸ್ತನ್ನು ಇದು ಮರೆಮಾಚುತ್ತದೆ. ಬೆಳಿಗ್ಗೆ ಎದ್ದು ಮುಖ ತೊಳೆದ ತಕ್ಷಣ ಐಸ್ ಕ್ಯೂಬ್ ಅನ್ನು ಮುಖಕ್ಕೆ ತಿಕ್ಕಿ. 10 ನಿಮಿಷ ಹೀಗೆ ಮಾಡಿದರೆ ಸಾಕು.
ಮೇಕಪ್ ಮಾಡುವಾಗ ಉತ್ತಮ ದರ್ಜೆಯ ಫೌಂಡೇಶನ್ ಅನ್ನೇ ಬಳಸಿ. ಕಣ್ಣಿನ ಕೆಳಭಾಗ, ಮೂಗಿನ ಬದಿ, ಗಲ್ಲ, ಕೆನ್ನೆಗೆ ಅಂದವಾಗಿ, ತೆಳುವಾಗಿ ಫೌಂಡೇಶನ್ ಅನ್ನು ಹಚ್ಚಿ.
ನಿಮ್ಮ ಮುಖದ ಆಕಾರ ಹಾಗೂ ಕಣ್ಣಿನ ರೂಪಕ್ಕೆ ಅನುಗುಣವಾಗಿ ಐಲ್ಯಾಶಸ್ ಹಚ್ಚಿ. ಐಲೈನರ್ ಬಳಸುವಾಗಲೂ ಎಚ್ಚರವಿರಲಿ.
ತಾಯಿಯಾದ ಮಾತ್ರಕ್ಕೆ ನಿಮ್ಮ ಮನಸ್ಸಿಗೆ ಪ್ರಾಯವಾಯಿತು ಎಂದುಕೊಂಡು ಮೇಕಪ್ ನಿಂದ ದೂರವಿರಬೇಡಿ. ತೆಳುವಾದ ಲಿಪ್ ಸ್ಟಿಕ್ ಹಚ್ಚಿಕೊಳ್ಳಿ. ಇದು ನಿಮ್ಮ ವಯಸ್ಸನ್ನು ಐದು ವರ್ಷ ಕಡಿಮೆ ಮಾಡುತ್ತದೆ.
ಐಬ್ರೋ ಶೇಪ್ ಗಾಗಿ ಸ್ವಲ್ಪ ಸಮಯವನ್ನು ಮೀಸಲಿಡಿ. ತಿಂಗಳಿಗೊಮ್ಮೆಯಾದರೂ ಹೇರ್ ಕಟ್, ಸ್ಟ್ರೈಟನಿಂಗ್ ಮಾಡಿಸಿ.