ಹುಡುಗಿ ಮದುವೆಗೆ ಅಡ್ಡಿಯಾಗ್ತಿದ್ದರೆ ಅದಕ್ಕೆ ಜಾತಕದಲ್ಲಿರುವ ದೋಷ ಕಾರಣ ಎಂದರ್ಥ. ಹುಡುಗಿ ಎಷ್ಟೇ ಪ್ರತಿಭಾವಂತಳಾಗಿರಲಿ, ಸೌಂದರ್ಯವತಿಯಾಗಿರಲಿ ಜಾತಕದಲ್ಲಿ ದೋಷ ಕಂಡು ಬಂದಲ್ಲಿ ಸಮಸ್ಯೆ ಎದುರಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವೊಂದು ಉಪಾಯಗಳು ಮಗಳ ಮದುವೆ ಬೇಗ ನೆರವೇರಲು ಸಹಾಯವಾಗುತ್ತದೆ.
ಹುಡುಗಿಯನ್ನು ನೋಡಲು ಹುಡುಗನ ಕಡೆಯವರು ಬಂದಾಗ ಹುಡುಗಿಗೆ ಹೊಸ ಬಟ್ಟೆಯನ್ನು ಹಾಕಬೇಕು. ಹಳದಿ ವಸ್ತ್ರವನ್ನು ಶುಭಕರವೆಂದು ಪರಿಗಣಿಸಲಾಗಿದೆ.
ಮದುವೆಗೆ ಅನಗತ್ಯ ವಿಳಂಬವಾಗುತ್ತಿದ್ದರೆ ಹುಡುಗಿ, ಗುರುವಾರ ಹಳದಿ ಹಾಗೂ ಶುಕ್ರವಾರ ಬಿಳಿ ಬಟ್ಟೆಯನ್ನು ಧರಿಸಬೇಕು.
ಮಗಳ ಮದುವೆ ವಿಚಾರ ಮಾತನಾಡುವ ವೇಳೆ ಕೊಠಡಿಯಲ್ಲಿ ಚಪ್ಪಲಿ-ಶೂ ಇರದಂತೆ ನೋಡಿಕೊಳ್ಳಿ. ಚಪ್ಪಲಿಯನ್ನು ಕೋಣೆಯಿಂದ ಹೊರಗೆ ಅಥವಾ ಕಾಣದಂತೆ ಇಡಬೇಕು.
ಸಂಬಂಧದ ಬಗ್ಗೆ ಮಾತನಾಡುವ ವೇಳೆ ಹುಡುಗಿ ಕೂದಲು ಹರಡಿಕೊಂಡಿರಲಿ. ಕೂದಲನ್ನು ಕಟ್ಟಿಡಬೇಡಿ.
ಬೇರೆಯವರ ಮದುವೆಗೆ ಹೋದ ವೇಳೆ ವಧು ಅಥವಾ ವರ ಹಚ್ಚಿಕೊಳ್ಳುವ ಮೆಹಂದಿಯಲ್ಲಿ ಸ್ವಲ್ಪ ಮೆಹಂದಿಯನ್ನು ಹುಡುಗಿಗೆ ಹಚ್ಚಬೇಕು.
16 ಸೋಮವಾರ ಹುಡುಗಿ ವೃತ ಮಾಡಬೇಕು. ಪ್ರತಿ ಸೋಮವಾರ ಶಿವನ ದೇವಸ್ಥಾನಕ್ಕೆ ಹೋಗಿ ಶಿವಲಿಂಗಕ್ಕೆ ಜಲವನ್ನು ಅರ್ಪಿಸಬೇಕು.
ಗುರುವಾರ ವಿಷ್ಣು-ಲಕ್ಷ್ಮಿ ಮಂದಿರಕ್ಕೆ ಹೋಗಬೇಕು. ದೇವರಿಗೆ 5 ಲಾಡನ್ನು ಅರ್ಪಿಸುವ ಜೊತೆಗೆ ಬೇಗ ಮದುವೆಯಾಗುವಂತೆ ಪ್ರಾರ್ಥನೆ ಮಾಡಬೇಕು.