ವೀಡಿಯೋ ಗೇಮ್‌ಗಳು ಮಕ್ಕಳ ಪಾಲಿಗೆ ಮಾರಣಾಂತಿಕವಾಗುತ್ತಿವೆ. ವಿಡಿಯೋ ಗೇಮ್‌ಗಳಿಂದ ಮಕ್ಕಳಲ್ಲಿ ಹೃದಯ ಬಡಿತದ ಸಮಸ್ಯೆಯಾಗಬಹುದು ಅನ್ನೋದು ಸಂಶೋಧನೆಯಲ್ಲಿ ಬಹಿರಂಗವಾಗಿದೆ. ಕಾರ್ಡಿಯಾಕ್ ಆರ್ಹೆತ್ಮಿಯಾವನ್ನು ಇದು ಉಂಟುಮಾಡಬಹುದು ಎಂದು ಹೊಸ ಅಧ್ಯಯನವೊಂದು ಹೇಳುತ್ತದೆ.
ಆಸ್ಟ್ರೇಲಿಯಾದ ದಿ ಹಾರ್ಟ್ ಸೆಂಟರ್ ಫಾರ್ ಚಿಲ್ಡ್ರನ್‌ನಲ್ಲಿ ಈ ಬಗ್ಗೆ ಸಂಶೋಧನೆ ನಡೆದಿದೆ. ತಜ್ಞರ ಪ್ರಕಾರ ಮಕ್ಕಳು ಎಷ್ಟೋ ಬಾರಿ ಎಲೆಕ್ಟ್ರಾನಿಕ್ ವಿಡಿಯೋ ಗೇಮ್‌ಗಳನ್ನು ಆಡುವಾಗ ಪ್ರಜ್ಞೆ ಕಳೆದುಕೊಳ್ಳುತ್ತಾರೆ. ಇದು ಒಮ್ಮೊಮ್ಮೆ ಕಾರ್ಡಿಯಾಕ್ ಸಮಸ್ಯೆಗೂ ಕಾರಣವಾಗಬಹುದು. ವಿಡಿಯೋ ಗೇಮ್‌ಗಳು ಕೆಲವು ಮಕ್ಕಳಿಗೆ ಗಂಭೀರ ಅಪಾಯವನ್ನು ಉಂಟುಮಾಡಬಹುದು. ಮೊದಲೇ ಕೆಲವು ಆರೋಗ್ಯ ಸಮಸ್ಯೆಗಳಿದ್ದರಂತೂ ಮಾರಣಾಂತಿಕವಾಗಿ ಪರಿಣಮಿಸಬಹುದು ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.
ಎಲೆಕ್ಟ್ರಾನಿಕ್ ಗೇಮಿಂಗ್ ಆಡುವಾಗ ಹಠಾತ್ತನೆ ಪ್ರಜ್ಞೆ ಕಳೆದುಕೊಂಡರೆ ಅಂತಹ ಮಕ್ಕಳನ್ನು ಹೃದಯ ತಜ್ಞರು ಪರೀಕ್ಷಿಸಬೇಕು. ಏಕೆಂದರೆ ಇದು ಗಂಭೀರ ಹೃದಯ ಸಮಸ್ಯೆಯ ಮೊದಲ ಚಿಹ್ನೆಯಾಗಿರಬಹುದು ಎನ್ನುತ್ತಾರೆ ವಿಜ್ಞಾನಿಗಳು. ವಿಜ್ಞಾನಿಗಳ ತಂಡ ಈ ಬಗ್ಗೆ ಸಾಕಷ್ಟು ವಿಸ್ತ್ರತ ಅಧ್ಯಯನ ನಡೆಸಿದೆ. ಸುಮಾರು 22 ಪ್ರಕರಣಗಳಲ್ಲಿ, ಮಲ್ಟಿಪ್ಲೇಯರ್ ವಾರ್ ಗೇಮಿಂಗ್ ಹೆಚ್ಚಾಗಿ ಪ್ರಚೋದಕವಾಗಿತ್ತು.
ಈ ವೇಳೆ ಕೆಲವು ಮಕ್ಕಳು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ವಿಡಿಯೋ ಗೇಮಿಂಗ್ ವೇಳೆ ಮಕ್ಕಳ ಹೃದಯದ ಲಯವೇ ತಪ್ಪಿ ಹೋಗುವ ಸಂದರ್ಭಗಳಿರುತ್ತವೆ. ಹಾಗಾಗಿ ಇಂತಹ ಪ್ರಚೋದನಕಾರಿ ಗೇಮ್‌ಗಳಿಂದ ಮಕ್ಕಳನ್ನು ದೂರವಿಡುವುದು ಉತ್ತಮ ಅನ್ನೋದು ವಿಜ್ಞಾನಿಗಳ ಸಲಹೆ.