![Image result for simple-natural-treatments-for-your-child-cough-cold winter](https://cdn.cdnparenting.com/articles/2018/02/329853815-H.jpg)
ಚಳಿಗಾಲದಲ್ಲಿ ಮಕ್ಕಳು ಬೇಗ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಶೀತ-ಕೆಮ್ಮು ಚಳಿಗಾಲದಲ್ಲಿ ಬರುವ ಸಾಮಾನ್ಯ ಸಮಸ್ಯೆ. ಹಾಗಂತ ನಿರ್ಲಕ್ಷ್ಯ ಸರಿಯಲ್ಲ. ಪದೇ ಪದೇ ವೈದ್ಯರು ನೀಡುವ ಔಷಧಿ ಸೇವನೆ ಮಾಡಿದ್ರೆ ಮಕ್ಕಳ ರೋಗ ನಿರೋಧಕ ಶಕ್ತಿ ಕ್ರಮೇಣ ಕಡಿಮೆಯಾಗುತ್ತದೆ. ಅಡುಗೆ ಮನೆಯ ವಸ್ತುಗಳನ್ನೇ ಬಳಸಿ ಕೆಮ್ಮು-ಶೀತ ಕಡಿಮೆ ಮಾಡಿಕೊಳ್ಳಬಹುದು. ಹೀಗೆ ಮಾಡಿದರೆ ರಾಸಾಯನಿಕ ಔಷಧಿಗಳಿಂದ ಉಂಟಾಗುವ ಹಾನಿ ತಪ್ಪಿಸಬಹುದು.
ಅರ್ಧ ಲೋಟ ನೀರಿಗೆ ಮೂರ್ನಾಲ್ಕು ತುಳಸಿ ಎಲೆಗಳನ್ನು ಹಾಕಿ ಚೆನ್ನಾಗಿ ಕುದಿಸಿ. ನೀರು ಆರಿದ ನಂತರ ಜೇನುತುಪ್ಪವನ್ನು ಸೇರಿಸಿ ಅದನ್ನು ಮಗುವಿಗೆ ಕುಡಿಸಿ.
ದಾಲ್ಚಿನ್ನಿ ಮತ್ತು ಜೇಷ್ಠಮದ್ದು ಶೀತಕ್ಕೆ ಉತ್ತಮ ಔಷಧ. ಅರ್ಧ ಕಪ್ ನೀರಿಗೆ ಜೇಷ್ಠಮದ್ದು ಹಾಕಿ ಚೆನ್ನಾಗಿ ಕುದಿಸಿ. ನಂತರ ಸ್ವಲ್ಪ ದಾಲ್ಚಿನಿ ಪೌಡರ್ ಹಾಕಿ. ಬೆಚ್ಚಗಿನ ಈ ಕಷಾಯವನ್ನು ದಿನಕ್ಕೆ 2 ರಿಂದ 3 ಬಾರಿ ಮಗುವಿಗೆ ಕುಡಿಯಲು ಕೊಡಿ.
ಪ್ರತಿರೋಧಕ ಶಕ್ತಿ ಹೆಚ್ಚಿಸಲು ಕಾಳು ಮೆಣಸು ಹಾಗೂ ನೆಲ್ಲಿಕಾಯಿ ಬಳಸಿ. ಇವೆರಡನ್ನು ಮಿಕ್ಸ್ ಮಾಡಿ ಮಗುವಿಗೆ ಒಂದು ಚಮಚ ನೀಡಿ.
ಪ್ರತಿದಿನ ಕುಡಿಯುವ ಹಾಲಿಗೆ ಸ್ವಲ್ಪ ಅರಿಶಿಣ ಹಾಕಿ ಕುಡಿಸಿದರೆ ಒಳ್ಳೇದು. ಇದು ಕೂಡ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಎಳ್ಳು ಎಣ್ಣೆಗೆ 1 ಬೆಳ್ಳುಳ್ಳಿ ಹಾಕಿ ಅದನ್ನು ಬಿಸಿ ಮಾಡಿ. ಈ ಎಣ್ಣೆ ಬೆಚ್ಚಗಿರುವಾಗ ಮಗುವಿನ ಬೆನ್ನಿನ ಮೇಲೆ ಮಸಾಜ್ ಮಾಡಿ.