ಮಕ್ಕಳನ್ನು ಸರಿಯಾದ ರೀತಿಯಲ್ಲಿ ಬೆಳೆಸುವುದು ಪೋಷಕರ ಮುಂದಿರುವ ಸವಾಲು. ಆದರೆ ಇದು ಅಂದುಕೊಂಡಷ್ಟು ಸುಲಭವಲ್ಲ. ಎಲ್ಲರೂ ತಮ್ಮ ಮಕ್ಕಳ ಯಶಸ್ಸನ್ನು ಬಯಸುತ್ತಾರೆ. ಇದರಲ್ಲಿ ಪೋಷಕರ ಪಾತ್ರವೂ ಪ್ರಮುಖವಾಗಿದೆ. ಮಗುವಿನ ಯಶಸ್ಸಿನ ಹಿಂದೆ ಕೆಲವೊಂದು ಸರಳ ಸೂತ್ರಗಳನ್ನು ಪೋಷಕರು ಅನುಸರಿಸಬೇಕು. ನಿಮ್ಮ ನಡವಳಿಕೆ ಕೂಡ ಬಹಳ ಮುಖ್ಯ.
ಕೆಲವು ಪೋಷಕರು ಮಕ್ಕಳನ್ನು ಬೈಯ್ಯುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಇದು ಸರಿಯಲ್ಲ, ಏಕೆಂದರೆ ಇದು ಮಕ್ಕಳ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ಮಕ್ಕಳ ಮಾತುಗಳನ್ನು ಕೇಳುವುದು ಮತ್ತು ಅವರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವುದು ಉತ್ತಮ. ಇದು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.
ಮಕ್ಕಳ ಭಾವನೆಗಳನ್ನು ಅರ್ಥಮಾಡಿಕೊಳ್ಳಿ: ಮಕ್ಕಳ ಭಾವನೆಗಳನ್ನು ಹೆತ್ತವರು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಅಳು, ಕೋಪ, ನಗು ಹೀಗೆ ಮಗುವಿನ ಪ್ರತಿ ಭಾವನೆಯನ್ನೂ ಗೌರವಿಸಬೇಕು. ತಾನು ವಿಶೇಷವೆಂಬ ಭಾವನೆ ಆಗ ಮಗುವಿನ ಮನಸ್ಸಿನಲ್ಲಿ ಮೂಡುತ್ತದೆ. ಇದು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುವುದಲ್ಲದೆ, ಹೆತ್ತವರ ಮೇಲಿನ ನಂಬಿಕೆಯನ್ನು ಹೆಚ್ಚಿಸುತ್ತದೆ. ಇದು ಸಕಾರಾತ್ಮಕ ಶಕ್ತಿಯ ಮೂಲವಾಗಿದೆ.
ಮಕ್ಕಳಿಗೆ ಪ್ರೀತಿ ತೋರಿಸಿ: ಪೋಷಕರು ಮೃದು ಸ್ವಭಾವ ಹೊಂದಿರುವುದು ಬಹಳ ಮುಖ್ಯ. ವಿಪರೀತ ಕೋಪದ ಪ್ರವೃತ್ತು ಮಕ್ಕಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಅಗತ್ಯವಿದ್ದಾಗ ನಿಮ್ಮ ಮಕ್ಕಳಿಗೆ ಪ್ರೀತಿಯನ್ನು ತೋರಿಸಿ. ಹೊರಹೋಗುವ ಮೊದಲು ಅವರಿಗೆ ‘ಲವ್ ಯೂ’ ಎಂದು ಹೇಳುವ ರೀತಿಯಲ್ಲಿ ಹಲವು ಮಾರ್ಗಗಳಿರಬಹುದು. ಇದು ನಿಮ್ಮ ಬಾಂಧವ್ಯವನ್ನು ಕೂಡ ಬಲಪಡಿಸುತ್ತದೆ.
ಮಕ್ಕಳ ಮಾತುಗಳನ್ನು ಕೇಳುವುದು ಅಗತ್ಯ: ಸಾಮಾನ್ಯವಾಗಿ ಅನೇಕ ಪೋಷಕರು ತಮ್ಮ ಮಕ್ಕಳ ಮಾತುಗಳನ್ನು ಕೇಳದೇ ಅರ್ಥಮಾಡಿಕೊಳ್ಳದೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸುತ್ತಾರೆ. ಹೀಗೆ ಮಾಡುವುದರಿಂದ ಅವರ ಆತ್ಮವಿಶ್ವಾಸ ಕಡಿಮೆಯಾಗುತ್ತದೆ. ಮಕ್ಕಳನ್ನು ಕೇಳುವುದು ಮತ್ತು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ.
ಮಕ್ಕಳನ್ನು ಹೊಗಳಿ: ಮಕ್ಕಳ ಮೇಲೆ ಹೆತ್ತವರು ಕೋಪಗೊಳ್ಳುವುದು ಸ್ವಲ್ಪ ಮಟ್ಟಿಗೆ ಸಮರ್ಥನೀಯ. ಆದರೆ ಅದನ್ನು ಯಾವಾಗಲೂ ಮಾಡಬಾರದು. ಹೀಗೆ ಮಾಡುವುದರಿಂದ ಅವರ ಆತ್ಮವಿಶ್ವಾಸ ಕುಸಿಯುತ್ತದೆ ಮತ್ತು ಯಶಸ್ಸಿನ ಹಾದಿಯು ಮುಚ್ಚಿಕೊಳ್ಳುತ್ತದೆ. ಮಕ್ಕಳನ್ನು ಪೋಷಕರು ಹೊಗಳಬೇಕು. ಪ್ರತಿ ಮಗುವೂ ಹೊಗಳಿಕೆ ಬಯಸುತ್ತದೆ. ಸಣ್ಣ ಪುಟ್ಟ ವಿಷಯಕ್ಕೂ ಹೊಗಳಿದರೆ ಮಕ್ಕಳಿಗೆ ಪ್ರೇರಣೆ ಸಿಗುತ್ತದೆ.
ಒಟ್ಟಿಗೆ ಆಹಾರ ಸೇವಿಸಿ: ಪೋಷಕರು ತಮ್ಮ ಮಕ್ಕಳೊಂದಿಗೆ ಕುಳಿತು ಆಹಾರ ಸೇವಿಸುವುದು ಬಹಳ ಮುಖ್ಯ. ಹೀಗೆ ಮಾಡುವುದರಿಂದ ಮಕ್ಕಳು ಮತ್ತು ಪೋಷಕರ ನಡುವೆ ಬಾಂಧವ್ಯ ಏರ್ಪಡುತ್ತದೆ. ಇಬ್ಬರೂ ಸ್ನೇಹಿತರಂತೆ ಇರಬಹುದು. ದಿನದಲ್ಲಿ ಕನಿಷ್ಠ ಒಮ್ಮೆಯಾದರೂ ಒಟ್ಟಿಗೆ ಊಟ ಸೇವಿಸಿ.