ಕೊರೊನಾ ಎಲ್ಲರ ಜೀವನ ಶೈಲಿ ಬದಲಾವಣೆ ಮಾಡಿದೆ. ಈ ಮೊದಲು ಮಕ್ಕಳು ಮನೆಯಿಂದ ಹೊರಗೆ ಹೋಗಿ ಆಟವಾಡ್ತಾ ಇದ್ರು. ಆದರೆ ಈಗ ಮನೆಯಿಂದ ಆಚೆ ಕಾಲು ಇಡೋದಿಲ್ಲ. ಕಾರಣ ಮೊಬೈಲ್ ಹುಚ್ಚು. ಮಕ್ಕಳಿಗೆ ಊಟ ಮಾಡಿಸುವಾಗಲೂ ಮೊಬೈಲ್ ಬೇಕು. ಮಲಗಿಸುವಾಗಲೂ ಮೊಬೈಲ್ ಬೇಕು. ಹೀಗೆ ಮೊಬೈಲ್ ಗೆ ಅಡಿಕ್ಟ್ ಆದ ಮಕ್ಕಳ ಕುರಿತು ಚೈಲ್ಡ್ ರೈಟ್ಸ್ ಸಂಸ್ಥೆಯು ಆಘಾತಕಾರಿ ಅಂಶವೊಂದನ್ನು ಹೊರ ಹಾಕಿದೆ.
ಹೌದು, ಮೊಬೈಲ್ ಗಾಗಿ ಮಕ್ಕಳು ಪೋಷಕರಿಗೆ ಬೆದರಿಕೆ ಹಾಕ್ತಾ ಇದ್ದಾರಂತೆ. ಅದು ಅಂತಿಂತ ಬೆದರಿಕೆ ಅಲ್ಲ. ಮನೆ ಬಿಟ್ಟು ಹೋಗುವ ಬೆದರಿಕೆ. ಹೀಗೆ ಬೆದರಿಕೆ ಹಾಕೋದು ಅಷ್ಟೆ ಅಲ್ಲ ಅನೇಕರು ಮನೆ ಬಿಟ್ಟು ಹೋಗಿರುವ ಘಟನೆಗಳೂ ಆಗಿವೆ. ಮಕ್ಕಳು ಮನೆ ಬಿಟ್ಟು ಹೋಗುವ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದ್ದು, ಕೊರೊನಾ ಬಳಿಕ ಮಕ್ಕಳು ಮನೆ ಬಿಟ್ಟು ಹೋಗುವ ಪ್ರಕರಣಗಳು ಹೆಚ್ಚಾಗಿವೆಯಂತೆ.
ಇನ್ನು ಮೊಬೈಲ್ ಹೆಚ್ಚೆಚ್ಚು ಬಳಸುತ್ತಿರೋ ಮಕ್ಕಳಲ್ಲಿ ಅನೇಕ ರೀತಿಯ ದುಷ್ಪರಿಣಾಮಗಳು ಕಂಡು ಬರುತ್ತಿವೆ. ಕಳೆದ 7 ತಿಂಗಳಲ್ಲಿ ಸುಮಾರು 50ಕ್ಕೂ ಹೆಚ್ಚು ಮಕ್ಕಳು ಕೆಸಿ ಜನರಲ್ ಆಸ್ಪತ್ರೆಯಲ್ಲಿ ಮೊಬೈಲ್ ಅಡಿಕ್ಟ್ ಸಂಬಂಧ ಕೌನ್ಸಿಲಿಂಗ್ ಪಡೆದಿದ್ದಾರಂತೆ. ಇಷ್ಟೆ ಆಗಿದ್ರೆ ಓಕೆ ಆದರೆ ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಮೆಂಟಲ್ ಟೆನ್ಷನ್ ಹೆಚ್ಚಾಗಿದೆಯಂತೆ. ಇಂಥಹದೊಂದು ಎಂಬ ಅಚ್ಚರಿಯ ಅಂಶ ಹೊರ ಹಾಕಿದೆ ಬಗ್ಗೆ ಚೈಲ್ಡ್ ರೈಟ್ಸ್ ಸಂಸ್ಥೆ.