ಚಿಕ್ಕಂದಿನಲ್ಲಿ ನೀವು ಹೆಚ್ಚು ಬುದ್ಧಿವಂತರಾಗಿದ್ರೆ ನಿಮ್ಮ ಆಯುಷ್ಯವೂ ಗಟ್ಟಿಯಾಗುತ್ತೆ. ಅಂದ್ರೆ ಹೃದಯದ ಸಮಸ್ಯೆಗಳು, ಸ್ಟ್ರೋಕ್, ಧೂಮಪಾನಕ್ಕೆ ಸಂಬಂಧಿಸಿದ ಕ್ಯಾನ್ಸರ್, ಉಸಿರಾಟಕ್ಕೆ ಸಂಬಂಧಪಟ್ಟ ರೋಗಗಳು ಹಾಗೂ ಬುದ್ಧಿಮಾಂದ್ಯತೆಯಂತಹ ಅಪಾಯಕಾರಿ ಖಾಲಿಲೆಗಳು ನಿಮ್ಮನ್ನು ಬಾಧಿಸುವುದಿಲ್ಲ.
ಎಡಿನ್ಬರ್ಗ್ ಯೂನಿವರ್ಸಿಟಿಯಲ್ಲಿ ನಡೆದಿದ್ದ ಸಂಶೋಧನೆಯಲ್ಲಿ ಈ ವಿಷಯ ದೃಢಪಟ್ಟಿದೆ. ಬಾಲ್ಯದಲ್ಲಿ ಐಕ್ಯೂ ಚೆನ್ನಾಗಿದ್ರೆ ಅಂಥವರು ದೀರ್ಘಾಯುಷಿಗಳಾಗ್ತಾರೆ ಅನ್ನೋದು ಇದೇ ಕಾರಣಕ್ಕೆ. ಬಾಲ್ಯದಲ್ಲಿನ ಬುದ್ಧಿವಂತಿಕೆ ಹಾಗೂ ಸಾವಿನ ಕಾರಣ ಇವೆರಡರ ಮಧ್ಯೆ ಅವಿನಾಭಾವ ಸಂಭಂಧವಿದೆ ಎನ್ನುತ್ತಾರೆ ವಿಜ್ಞಾನಿಗಳು.
ಚಿಕ್ಕ ವಯಸ್ಸಿನಲ್ಲಿ ಬುದ್ಧಿವಂತರಾಗಿದ್ದವರಿಗೆ 79 ವರ್ಷಗಳವರೆಗೂ ಪ್ರಾಣಕ್ಕೆ ಮಾರಕವಾಗುವಂಥಹ ಖಾಯಿಲೆಗಳು ಬರುವ ಸಾಧ್ಯತೆ ಕಡಿಮೆಯಾಗಿರುತ್ತದೆ. ಸುಮಾರು 70,000 ಜನರನ್ನು ಪರೀಕ್ಷೆಗೆ ಒಳಪಡಿಸಿದ ಬಳಿಕ ವಿಜ್ಞಾನಿಗಳು ಈ ತೀರ್ಮಾನಕ್ಕೆ ಬಂದಿದ್ದಾರೆ.
ಆದ್ರೆ ಬಾಲ್ಯದಲ್ಲಿ ಅತಿ ಬುದ್ಧಿವಂತರಾಗಿದ್ದು, ನಂತರ ಚಟಕ್ಕೆ ಬಿದ್ದವರಿಗೆ ಈ ಸಂಶೋಧನೆ ಅನ್ವಯವಾಗುವುದಿಲ್ಲ. ತಂಬಾಕು ಸೇವನೆ, ಧೂಮಪಾನದಂತಹ ಚಟವನ್ನು ಅತಿಯಾಗಿ ಮಾಡುವವರಿಗೆ ಬಹುಬೇಗ ಕ್ಯಾನ್ಸರ್ ನಂತಹ ಖಾಯಿಲೆಗಳು ಆವರಿಸುತ್ತವೆ. ಸಾವು ಕೂಡ ಸನಿಹದಲ್ಲೇ ಇರುತ್ತದೆ.