ಭಾರತದ ಎಲ್ಲ ಪ್ರದೇಶದಲ್ಲಿ ಸಿಗುವ ತರಕಾರಿ ಬೀಟ್ರೋಟ್. ನೆಲದಡಿ ಬೆಳೆಯುವ ಈ ಬಿಟ್ರೋಟ್ ಕೆನ್ನೇರಳೆ ಕೆಂಪು ಬಣ್ಣದಲ್ಲಿರುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಇದನ್ನು ಶನಿಗೆ ಹೋಲಿಕೆ ಮಾಡಲಾಗಿದೆ. ಇದನ್ನು ತಿಂದ್ರೆ ಶನಿ ಪ್ರಭಲನಾಗ್ತಾನೆ. ಹಾಗೆ ದಾನ ಮಾಡಿದ್ರೆ ಶನಿ ದೋಷ ಕಡಿಮೆಯಾಗುತ್ತದೆ ಎಂದು ನಂಬಲಾಗಿದೆ.
ಬೀಟ್ರೋಟ್ ಮಕ್ಕಳ ಬುದ್ದಿ ಶಕ್ತಿಯನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ಬೀಟ್ರೋಟ್ ಸಲಾಡನ್ನು ಮಕ್ಕಳಿಗೆ ತಿನ್ನಿಸಬೇಕು. ಬೀಟ್ರೋಟ್ ಹೋಳುಗಳನ್ನು ನೀರಿಗೆ ಹಾಕಿ ಕುದಿಸಿ ಅದು ಬಿಡುವ ರಸವನ್ನು ಮಕ್ಕಳಿಗೆ ಸೂಪ್ ರೀತಿಯಲ್ಲಿ ಕುಡಿಸಬೇಕು. ಇದು ಮಕ್ಕಳ ಮಿದುಳು ವೇಗ ಪಡೆಯಲು ನೆರವಾಗುತ್ತದೆ.
ದಟ್ಟ ಕೂದಲು ಬೆಳವಣಿಗೆಗೂ ಬೀಟ್ರೋಟ್ ಸಹಕಾರಿ. ಬೀಟ್ರೋಟ್ ರಸವನ್ನು ಕೂದಲು ಉದುರಿರುವ ಜಾಗಕ್ಕೆ ದಿನಕ್ಕೆ 3-4 ಬಾರಿ ಹಚ್ಚಿ. ಉದುರಿದ ಕೂದಲು ಮತ್ತೆ ಬರಲು ಶುರುವಾಗುತ್ತದೆ. ಪ್ರತಿ ದಿನ ಬೀಟ್ರೋಟ್ ಹಾಗೂ ನೆಲ್ಲಿಕಾಯಿ ರಸವನ್ನು ತಲೆಗೆ ಮಸಾಜ್ ಮಾಡುವುದ್ರಿಂದಲೂ ಸಾಕಷ್ಟು ಲಾಭವಿದೆ.
ದೇಹದಲ್ಲಿ ರಕ್ತದ ಕೊರತೆಯಿರುವವರು ಬೀಟ್ರೋಟನ್ನು ಅವಶ್ಯವಾಗಿ ತಿನ್ನಬೇಕು. ಕಬ್ಬಿಣ ಹಾಗೂ ಹಿಮೋಗ್ಲೋಬಿನ್ ಕೊರತೆಯಿರುವವರು ಬೀಟ್ರೋಟನ್ನು ಸಲಾಡ್ ರೂಪದಲ್ಲಿ ತಿನ್ನಬೇಕು.
ಮಕ್ಕಳಿಗೆ ಹಲ್ಲು ಅಥವಾ ಒಸಡು ನೋವಿದ್ದರೆ ಬೀಟ್ರೋಟ್ ಒಳ್ಳೆ ಮದ್ದು. ಬೀಟ್ರೋಟ್ ರಸವನ್ನು ತೆಗೆದು ಒಸಡು ಅಥವಾ ನೋವಿರುವ ಜಾಗದಲ್ಲಿಟ್ಟುಕೊಂಡರೆ ಕೆಲವೇ ಸಮಯದಲ್ಲಿ ನೋವು ಮಾಯವಾಗುತ್ತದೆ.
ಹೃದಯ ರೋಗಿಗಳಿಗೆ ಹಾಗೂ ಮಧುಮೇಹಿಗಳಿಗೆ ಬೀಟ್ರೋಟ್ ಒಳ್ಳೆಯದು.