ಬಾಯಲ್ಲಿ ಹುಣ್ಣಾಗುವುದು ಸಾಮಾನ್ಯ ಸಂಗತಿ. ಅತಿಯಾದ ಔಷಧಿ ಸೇವನೆ ಅಥವಾ ಉಷ್ಣತೆ ಹೆಚ್ಚಾದ್ರೆ ಬಾಯಲ್ಲಿ ಹುಣ್ಣು ಕಾಣಿಸಿಕೊಳ್ಳುತ್ತದೆ. ದೊಡ್ಡವರ ಬಾಯಲ್ಲಿ ಹುಣ್ಣಾದ್ರೆ ಹೇಗೋ ಸಹಿಸಿಕೊಳ್ತಾರೆ.
ಆದ್ರೆ ಮಕ್ಕಳ ಬಾಯಲ್ಲಿ ಹುಣ್ಣಾದ್ರೆ ನೋವು ಸಹಿಸಿಕೊಳ್ಳೋದು ಅವ್ರಿಗೆ ಕಷ್ಟ. ಮಕ್ಕಳ ಬಾಯಲ್ಲಾಗುವ ಹುಣ್ಣಿಗೆ ಸಾಕಷ್ಟು ಮನೆ ಮದ್ದುಗಳಿವೆ.
ಜೇನುತುಪ್ಪ ಬಳಸಿ ಮಕ್ಕಳ ಬಾಯಲ್ಲಿ ಆದ ಹುಣ್ಣನ್ನು ನೀವು ಕಡಿಮೆ ಮಾಡಬಹುದು. ಕೈ ಬೆರಳಿನಲ್ಲಿ ಸ್ವಲ್ಪ ಜೇನುತುಪ್ಪ ತೆಗೆದುಕೊಂಡು ಹುಣ್ಣಾಗಿರುವ ಜಾಗಕ್ಕೆ ಹಚ್ಚಿ. ಇದು ಹುಣ್ಣನ್ನು ಕಡಿಮೆ ಮಾಡಲು ನೆರವಾಗುತ್ತದೆ.
ಜೇನು ತುಪ್ಪಕ್ಕೆ ಸ್ವಲ್ಪ ಅರಿಶಿನವನ್ನು ಸೇರಿಸಿ ಕೂಡ ಹುಣ್ಣಿಗೆ ಹಚ್ಚಬಹುದು. ಅರಿಶಿನದಲ್ಲಿ ಉರಿಯೂತ ನಿರೋಧಕ ಗುಣ ಮತ್ತು ಆಂಟಿಮೈಕ್ರೊಬಿಯಲ್ ಗುಣವಿರುತ್ತದೆ. ಇದು ಗಾಯವನ್ನು ಗುಣಪಡಿಸಲು ನೆರವಾಗುತ್ತದೆ.
ಬಾಯಿ ಹುಣ್ಣನ್ನು ತೆಂಗಿನ ಎಣ್ಣೆ ಕೂಡ ಕಡಿಮೆ ಮಾಡಬಲ್ಲದು. ತೆಂಗಿನ ಎಣ್ಣೆ, ಹಾಲು ಹಾಗೂ ನೀರನ್ನು ಹುಣ್ಣಿನ ಮೇಲೆ ಹಚ್ಚಿದ್ರೆ ಹುಣ್ಣು ಗುಣವಾಗುತ್ತದೆ.
ಮಕ್ಕಳ ಬಾಯಲ್ಲಿ ಹುಣ್ಣಾದ್ರೆ ಎಳನೀರನ್ನು ಕುಡಿಸಿ. ತೆಂಗಿನ ಹಾಲು ಕುಡಿಸುವುದ್ರಿಂದಲೂ ಹುಣ್ಣು ಕಡಿಮೆಯಾಗುತ್ತದೆ.