ನೂಡಲ್ಸ್ ಎಂದರೆ ಮಕ್ಕಳ ಬಾಯಲ್ಲಿ ನೀರು ಬರುತ್ತದೆ. ಈಗಂತೂ ಮನೆಯಲ್ಲಿಯೇ ಇದ್ದಾರೆ. ಬೇಗನೆ ಆಗಿ ಬಿಡುವಂತಹ ತಿಂಡಿ ಅವರಿಗೂ ಇಷ್ಟ. ಇಲ್ಲಿ ಥಟ್ಟಂತ ಮಾಡಿಬಿಡುವ ವೆಜಿಟೇಬಲ್ ನೂಡಲ್ಸ್ ಇದೆ ಟ್ರೈ ಮಾಡಿ.
ಬೇಕಾಗುವ ಸಾಮಗ್ರಿಗಳು:
1 ಪ್ಯಾಕ್ ಇನ್ಸ್ ಟೆಂಟ್ – ನೂಡಲ್ಸ್ (ನಿಮಗೆ ಇಷ್ಟವಾದದ್ದು), ಎಣ್ಣೆ – 1 ಟೀ ಸ್ಪೂನ್, ಕ್ಯಾರೆಟ್ – 1 ಚಿಕ್ಕದಾಗಿ ಕತ್ತರಿಸಿದ್ದು, ಬೀನ್ಸ್ – 10 (ಚಿಕ್ಕದಾಗಿ ಕತ್ತರಿಸಿಕೊಳ್ಳಿ), ಕ್ಯಾಪ್ಸಿಕಂ – 1/4 ಕಪ್ – ಚಿಕ್ಕದಾಗಿ ಕತ್ತರಿಸಿಕೊಳ್ಳಿ, ನೀರು – ಅಗತ್ಯವಿರುವಷ್ಟು.
ಮಾಡುವ ವಿಧಾನ:
ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದು ಬಿಸಿಯಾಗುತ್ತಲೇ ಎಣ್ಣೆ ಹಾಕಿ ನಂತರ ಅದಕ್ಕೆ ಕ್ಯಾರೆಟ್, ಬೀನ್ಸ್, ಕ್ಯಾಪ್ಸಿಕಂ ಹಾಕಿ ಫ್ರೈ ಮಾಡಿಕೊಳ್ಳಿ. ಇದರ ಹಸಿವಾಸನೆ ಹೋಗಲಿ. ನಂತರ ಇದಕ್ಕೆ ನೂಡಲ್ಸ್ ಹಾಕಿ ಹಾಗೇ ಬಿಸಿ ನೀರು ಹಾಕಿ 3 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ನಂತರ ಟೇಸ್ಟ್ ಮೇಕರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಸರ್ವ್ ಮಾಡಿ.