alex Certify ಮಕ್ಕಳ ಬಗ್ಗೆ ಬೇಡ ಅತೀ ಕಾಳಜಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳ ಬಗ್ಗೆ ಬೇಡ ಅತೀ ಕಾಳಜಿ

ಕೆಲ ತಂದೆ-ತಾಯಿ ಮಕ್ಕಳ ಮೇಲೆ ಅತಿ ಹೆಚ್ಚು ಕಾಳಜಿ ವಹಿಸ್ತಾರೆ. ಮಕ್ಕಳ ಪ್ರತಿಯೊಂದು ಚಲನವಲನಗಳ ಮೇಲೆ ನಿಗಾ ಇಡ್ತಾರೆ. ಪಾಲಕರ ಈ ವರ್ತನೆ ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅಧ್ಯಯನವೊಂದು ಇದನ್ನು ದೃಢಪಡಿಸಿದೆ.

ಪಾಲಕರು ಅವಶ್ಯಕತೆಗಿಂತ ಹೆಚ್ಚು ಮಕ್ಕಳ ರಕ್ಷಣೆಗೆ ನಿಲ್ಲುವುದು ಮಕ್ಕಳ ನಡವಳಿಕೆ, ಭಾವನೆ, ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಪಾಲಕರು ಮಕ್ಕಳ ಶಿಕ್ಷಣ, ಸಮಸ್ಯೆ, ಜೀವನದ ಬಗ್ಗೆ ಅಗತ್ಯಕ್ಕಿಂತ ಹೆಚ್ಚು ಗಮನ ನೀಡ್ತಾರೆ. ಇದ್ರಿಂದ ಮಕ್ಕಳಿಗೆ ಮುಂದೆ ಎದುರಾಗುವ ಸಮಸ್ಯೆ ವಿರುದ್ಧ ಹೋರಾಡುವ ಆತ್ಮಸ್ಥೈರ್ಯ ಇರುವುದಿಲ್ಲ. ಇಂಥ ಮಕ್ಕಳು ಸಮಾಜದ ಜನರ ಜೊತೆ ಬೆರೆಯುವುದಿಲ್ಲ. ಪ್ರತಿಯೊಂದು ಕೆಲಸಕ್ಕೂ ಮಕ್ಕಳು ಬೇರೆಯವರನ್ನು ಅವಲಂಬಿಸುತ್ತಾರೆ.

ಪ್ರತಿಯೊಬ್ಬರೂ ತಮ್ಮ ಭಾವನೆ ಹಾಗೂ ವರ್ತನೆ ಮೇಲೆ ನಿಯಂತ್ರಣ ಸಾಧಿಸುವುದನ್ನು ಕಲಿಯಬೇಕು. ಪಾಲಕರು ಹೆಚ್ಚು ರಕ್ಷಣೆಗೆ ನಿಂತಾಗ ಮಕ್ಕಳಿಗೆ ಈ ಶಕ್ತಿ ಇರುವುದಿಲ್ಲ. ಅವ್ರು ಮಾನಸಿಕವಾಗಿ ದುರ್ಬಲರಾಗಿ ಬೇರೆಯವರನ್ನು ಅವಲಂಬಿಸಲು ಶುರುಮಾಡ್ತಾರೆ. ಇದೇ ಆಟ ಆಡಿ, ಇದೇ ಆಟಿಕೆಯಲ್ಲಿ ಆಡಿ ಹೀಗೆ ಮಕ್ಕಳ ಮೇಲೆ ಪಾಲಕರು ಒತ್ತಡ ಹೇರುವಂತೆ ಮಾಡಲಾಯ್ತು. ಈ ವೇಳೆ ಕೆಲ ಮಕ್ಕಳು ಪಾಲಕರ ವಿರೋಧ ಮಾಡಿದ್ರೆ ಮತ್ತೆ ಕೆಲವರು ನಿರಾಶೆ ವ್ಯಕ್ತಪಡಿಸಿದ್ರು. ಮಕ್ಕಳು-ಪಾಲಕರ ನಡುವಿನ ಅಧ್ಯಯನದ ನಂತ್ರ ಈ ವರದಿ ನೀಡಲಾಯ್ತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...