ಮಕ್ಕಳನ್ನು ಖುಷಿಪಡಿಸಲು ಅವರನ್ನು ಸ್ವಿಮ್ಮಿಂಗ್ ಪೂಲ್ ಗೆ ಕರೆದೊಯ್ಯುವ ಹೆತ್ತವರು ಆಟಿಕೆಗಳನ್ನ ಕೊಡ್ತಾರೆ. ಚೆಂಡು, ಆರ್ಮ್ ಬ್ಯಾಂಡ್, ಪ್ಲಾಸ್ಟಿಕ್ ಆಟಿಕೆಗಳನ್ನು ಕೊಟ್ಟು ಆಟವಾಡಲು ಬಿಡ್ತಾರೆ. ಆದ್ರೆ ಈ ಆಟಿಕೆಗಳು ಮಕ್ಕಳ ಪಾಲಿಗೆ ತುಂಬಾನೇ ಅಪಾಯಕಾರಿ. ಇತ್ತೀಚೆಗೆ ನಡೆಸಿದ ಸಂಶೋಧನೆಯಲ್ಲಿ ಇದು ದೃಢಪಟ್ಟಿದೆ.
ಈಜುಕೊಳದಲ್ಲಿ ಮಕ್ಕಳಿಗೆ ಆಟವಾಡಲು ಕೊಡುವ ಟಾಯ್ಸ್ ನಿಂದ ಕ್ಯಾನ್ಸರ್ ಬರುವ ಅಪಾಯವಿದೆ. ಜರ್ಮನಿಯಲ್ಲಿ ಈ ಕುರಿತಂತೆ ಸಂಶೋಧನೆ ನಡೆಸಲಾಗಿದೆ. ಗಾಳಿ ತುಂಬಿದ ಬೀಚ್ ಬಾಲ್, ಆರ್ಮ್ ಬ್ಯಾಂಡ್, ಸ್ವಿಮ್ಮಿಂಗ್ ಪೇರ್, ಎರಡು ಸ್ನಾನದ ರಿಂಗ್ ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.
ಇವನ್ನೆಲ್ಲ ಪಿವಿಸಿಯಿಂದ ತಯಾರಿಸಿರುವುದು ದೃಢಪಟ್ಟಿದೆ. ಈ ಆಟಿಕೆಗಳ ವಾಸನೆಯನ್ನು ಕೂಡ ಪರೀಕ್ಷೆಗೆ ಒಳಪಡಿಸಲಾಯ್ತು. 32 ಆಟಿಕೆಗಳಿಂದ 46 ಬಗೆಯ ವಾಸನೆ ಹೊರಹೊಮ್ಮಿದೆ. ಇವುಗಳಲ್ಲಿ 13 ಬಗೆಯ ವಾಸನೆಗಳು ಅತ್ಯಂತ ಸ್ಟ್ರಾಂಗ್ ಆಗಿದ್ದವು. ಒಂದೊಂದು ವಾಸನೆಯಿಂದ್ಲೂ ಒಂದೊಂದು ಬಗೆಯ ಟಾಕ್ಸಿನ್ಸ್ ಹೊರಹೊಮ್ಮುತ್ತವೆ.
ಈ ವಾಸನೆಯನ್ನು ಆಸ್ವಾದಿಸುವುದು ಮಕ್ಕಳ ಪಾಲಿಗೆ ಬಲು ಅಪಾಯಕಾರಿ. ಈ ವಾಸನೆಯಿಂದ ಮನುಷ್ಯರಿಗೆ ಕ್ಯಾನ್ಸರ್ ಬರುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಹಾಗಾಗಿ ಯಾವುದೇ ಕಾರಣಕ್ಕೂ ಈಜುಕೊಳದಲ್ಲಿ ಆಡಲು ಮಕ್ಕಳಿಗೆ ಆಟಿಕೆಗಳನ್ನು ಕೊಡಬೇಡಿ ಎನ್ನುತ್ತಾರೆ ತಜ್ಞರು.