ಅಮೇಜಾನ್‌ನ ಅಲೆಕ್ಸಾ, ಓಕೆ ಗೂಗಲ್‌ನಂತಹ ಡಿವೈಸ್‌ಗಳು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನಪ್ರಿಯವಾಗಿವೆ. ಕೇವಲ ಮನರಂಜನೆಗೆ ಮಾತ್ರವಲ್ಲದೆ ಇತರ ಕೆಲಸಗಳಿಗೂ ಜನರು ಅವುಗಳನ್ನು ಬಳಸಿಕೊಳ್ತಿದ್ದಾರೆ. ಆದ್ರೀಗ ಅಮೇಜಾನ್‌ನ ಅಲೆಕ್ಸಾ ಕೊಟ್ಟಿರೋ ಅಪಾಯಕಾರಿ ಸಲಹೆಯೊಂದು ಚರ್ಚೆಗೆ ಗ್ರಾಸವಾಗಿದೆ.
ಪಬ್ ಮಾಲೀಕ,45 ವರ್ಷದ ಆಡಮ್ ಚೇಂಬರ್ಲೇನ್ ತನ್ನ ಮನೆಗೆ ಹೊಸ ಸ್ಮಾರ್ಟ್ ಸ್ಪೀಕರ್ ಖರೀದಿಸಿದ್ದ. ಅಲೆಕ್ಸಾಗೆ ಹೀಗೆಯೇ ಸರಳವಾದ ಪ್ರಶ್ನೆಗಳನ್ನು ಆಡಮ್ ಕೇಳಿದ್ದಾನೆ. ಮಕ್ಕಳ ನಗು ನಿಲ್ಲಿಸುವುದು ಹೇಗೆ ಅಂತಾ ಪ್ರಶ್ನಿಸಿದ್ದಾನೆ.
ಇದಕ್ಕೆ ಅಲೆಕ್ಸಾ ಕೊಟ್ಟ ಉತ್ತರ ನಿಜಕ್ಕೂ ಶಾಕಿಂಗ್ ಆಗಿತ್ತು. ಮಕ್ಕಳ ಗಂಟಲಿಗೆ ಪಂಚ್ ಮಾಡಿಬಿಡಿ, ಅವರು ನೋವಿನಿಂದ ನರಳುತ್ತಿದ್ದರೆ ಮತ್ತು ಉಸಿರಾಡಲು ಸಾಧ್ಯವಾಗದಿದ್ದರೆ ನಗುವ ಸಾಧ್ಯತೆ ಕಡಿಮೆ ಅಂತಾ ಅಲೆಕ್ಸಾ ಉತ್ತರಿಸಿದೆ. ಈ ಕ್ರೂರ ಪ್ರತಿಕ್ರಿಯೆಯನ್ನು ಆಡಮ್ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಅನೇಕರು ಈ ಪೋಸ್ಟ್ ಅನ್ನು ತಮಾಷೆಯ ರೀತಿಯಲ್ಲಿ ನೋಡಿದ್ದಾರೆ. ಅಲೆಕ್ಸಾ ಉತ್ತರವನ್ನು ಕೇಳಿಸಿಕೊಂಡಿದ್ದಾರೆ. ಆದರೆ ಇಂತಹ ಪ್ರತಿಕ್ರಿಯೆ ಅಪಾಯಕಾರಿ ಅಂತಾ ಆಡಮ್ ಹೇಳಿಕೊಂಡಿದ್ದಾನೆ. ಅಮೇಜಾನ್ ಕೂಡ ಈ ಬಗ್ಗೆ ಗಮನಹರಿಸಿದ್ದು, ಸಪ್ಟೆಂಬರ್‌ನಲ್ಲಿಯೇ ಡಿವೈಸ್‌ನಿಂದ ಈ ಉತ್ತರವನ್ನು ತೆಗೆದುಹಾಕಿರುವುದಾಗಿ ಹೇಳಿಕೊಂಡಿದೆ. ಅದೇನೇ ಆದ್ರೂ ಇಂತಹ ಡಿವೈಸ್‌ಗಳ ಅತಿಯಾದ ಬಳಕೆ ಎಷ್ಟು ಅಪಾಯಕಾರಿ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ.