ಚಿಕ್ಕಮಕ್ಕಳು ಬಿಸ್ಕೇಟ್, ಚಾಕೋಲೇಟ್ ತಿಂದು ಸರಿಯಾಗಿ ಊಟ ಮಾಡುವುದಿಲ್ಲ ಇದರಿಂದ ತೂಕ ಹೆಚ್ಚಾಗುತ್ತಿಲ್ಲ ಎಂಬ ಚಿಂತೆ
ಮಕ್ಕಳಿಗೆ ಸಿಹಿ ಎಂದರೆ ತುಂಬಾ ಖುಷಿ. ಹಾಗಾಗಿ ರುಚಿಕರವಾದ ಪಾಯಸ ಮಾಡಿಕೊಡುವುದರಿಂದ ಅವರ ತೂಕ ಹೆಚ್ಚಾಗುತ್ತದೆ. ಬಾರ್ಲಿ ಪಾಯಸವನ್ನು ಆಗಾಗ ಮಾಡಿಕೊಡುವುದರಿಂದ ಮಕ್ಕಳ ತೂಕ ಆರೋಗ್ಯಕರವಾಗಿ ಹೆಚ್ಚಾಗುತ್ತದೆ.
ಮೊದಲಿಗೆ ¼ ಕಪ್ ಬಾರ್ಲಿಯನ್ನು ತುಪ್ಪದಲ್ಲಿ ಚೆನ್ನಾಗಿ ಹುರಿದುಕೊಳ್ಳಿ. ಇದನ್ನು ಒಂದು ಪಾತ್ರೆಗೆ ಹಾಕಿ ನೀರು ಸೇರಿಸಿ ಚೆನ್ನಾಗಿ ಬೇಯಿಸಿಕೊಳ್ಳಿ. ಬಾರ್ಲಿ ಚೆನ್ನಾಗಿ ಬೇಯಲಿ ನಂತರ ಇದಕ್ಕೆ 1 ಗ್ಲಾಸ್ ಹಾಲು ಸೇರಿಸಿ ಕುದಿಸಿ. ಕಲ್ಲು ಸಕ್ಕರೆ ಸೇರಿಸಿ. ನಂತರ ಬಾದಾಮಿ, ಗೋಡಂಬಿಯನ್ನು ಕೂಡ ತುಪ್ಪದಲ್ಲಿ ಹುರಿದುಕೊಂಡು ಚಿಕ್ಕದ್ದಾಗಿ ಕತ್ತರಿಸಿ ಈ ಪಾಯಸಕ್ಕೆ ಸೇರಿಸಿ. ಇದನ್ನು 2 ವರ್ಷದಿಂದ 6 ವರ್ಷದ ಮಕ್ಕಳಿಗೆ ಕೊಡಬಹುದು. ಅವರ ತೂಕ ಹೆಚ್ಚಾಗುತ್ತದೆ.
ಒಂದು ಕಪ್ ನೀರಿಗೆ 2 ಸ್ಪೂನ್ ನಷ್ಟು ಜೀರಿಗೆ ಹಾಕಿ ನೆನೆಸಿಡಿ. ನಂತರ ಇದಕ್ಕೆ ಇನ್ನೊಂದು ಕಪ್ ನೀರು ಸೇರಿಸಿ ಸಣ್ಣ ಉರಿಯಲ್ಲಿ ಕುದಿಸಿ. 2 ಕಪ್ ನೀರು ಒಂದು ಕಪ್ ಆಗುವವರೆಗೆ ಚೆನ್ನಾಗಿ ಕುದಿಸಿ. ಇದಕ್ಕೆ ಸ್ವಲ್ಪ ಬೆಲ್ಲ ಸೇರಿಸಿ ಬೆಲ್ಲ ಕರಗುವವರೆಗೆ ಕುದಿಸಿ. 5 ವರ್ಷದ ಮೇಲಿನ ಮಕ್ಕಳಿಗೆ ದಿನಾ ¼ ಕಪ್ ನಷ್ಟು ಕೊಟ್ಟರೆ ಮಕ್ಕಳಿಗೆ ಹಸಿವು ಹೆಚ್ಚಾಗಿ ಚೆನ್ನಾಗಿ ಊಟ ತಿನ್ನುತ್ತಾರೆ.