ಹಠಮಾರಿ ಹಾಗೂ ಕೋಪದ ಮಕ್ಕಳಿಂದ ಪಾಲಕರ ಮಾನಸಿಕ ಹಾಗೂ ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ. ಮಕ್ಕಳನ್ನು ಶಾಂತಗೊಳಿಸಲು ಪಾಲಕರು ಹರಸಾಹಸಪಡ್ತಾರೆ. ಧರ್ಮಗ್ರಂಥಗಳ ಪ್ರಕಾರ, ಸಂಕಟಗಳನ್ನು ಬಗೆಹರಿಸುವ ಹನುಮಂತನ ಆರಾಧನೆಯಿಂದ ಕೋಪ ಕಡಿಮೆ ಮಾಡಬಹುದಂತೆ.
ಹನುಮಂತನನ್ನು ಖುಷಿಪಡಿಸಿದ್ರೆ ನಿಮ್ಮ ಮಕ್ಕಳು ಶಾಂತ ಸ್ವಭಾವದವರೂ, ಬುದ್ಧಿವಂತರೂ ಆಗ್ತಾರೆ. ಗ್ರಹಗಳ ಪ್ರಭಾವದಿಂದ ಮಕ್ಕಳು ಕೋಪಿಷ್ಟರು, ಹಠಮಾರಿಗಳು ಆಗ್ತಾರೆ. ಇಂಥ ಮಕ್ಕಳನ್ನು ಶಾಂತಗೊಳಿಸಲು ಹನುಮಂತನ ಆರಾಧನೆಯೊಂದೆ ಉತ್ತಮ ಮಾರ್ಗ.
ಪ್ರತಿ ಮಂಗಳವಾರ ಹಾಗೂ ಶನಿವಾರ ಹನುಮಂತನ ಎಡ ಪಾದದ ಸಿಂಧೂರವನ್ನು ಮಕ್ಕಳ ಹಣೆಗೆ ಹಚ್ಚುತ್ತ ಬನ್ನಿ. ನಿಧಾನವಾಗಿ ಮಕ್ಕಳ ಕೋಪ ಶಾಂತವಾಗುತ್ತದೆ. ಓಂ ಹನುಮತೇ ನಮಃ ಮಂತ್ರವನ್ನು ಮಕ್ಕಳಿಗೆ ಹೇಳಿಕೊಡಿ. ಹನುಮಂತನ 12 ಹೆಸರುಗಳನ್ನು ಪ್ರತಿ ದಿನ ಸ್ಮರಣೆ ಮಾಡುವುದ್ರಿಂದಲೂ ಇದಕ್ಕೆ ಪರಿಹಾರ ಸಿಗಲಿದೆ. ಹನುಮಂತ ಶಕ್ತಿ ಹಾಗೂ ಬುದ್ಧಿ ನೀಡುವ ದೇವರು. ಮಗುವಿಗೆ ಪದೇ ಪದೇ ದೃಷ್ಟಿ ಬೀಳುತ್ತಿದ್ದರೆ ಹನುಮಂತನ ಬಲ ಪಾದದ ಸಿಂಧೂರವನ್ನು ಹಣೆಗೆ ಹಚ್ಚಿ.