ನವಜಾತ ಶಿಶುವಿನ ತಲೆಯಲ್ಲಿ ಕೂದಲಿಲ್ಲ ಎಂಬ ಕೊರಗಿದ್ದರೆ ಅದಕ್ಕೆ ಎರಡು ಕಾರಣಗಳಿರಬಹುದು. ಮೊದಲನೆಯದು ಅನುವಂಶಿಯತೆ, ಎರಡನೆಯದು ಪೋಷಕಾಂಶಗಳ ಕೊರತೆ.
ಇದಕ್ಕೆ ಅನಾವಶ್ಯಕವಾಗಿ ಚಿಂತಿಸಬೇಕಿಲ್ಲ. ಮಗು ಬೆಳೆಯುತ್ತಿದ್ದಂತೆ ಕೂದಲೂ ಉದ್ದಕ್ಕೆ ಬೆಳೆಯುತ್ತದೆ. ಆಗಲೂ ಬೆಳೆಯಲಿಲ್ಲ ಎಂದಾದರೆ ಹೀಗೆ ಮಾಡಬಹುದು.
ಎದೆಹಾಲು ಕುಡಿಯುವ ಮಗುವಿಗೆ ಎಲ್ಲಾ ಪೋಷಕಾಂಶಗಳು ಹಾಲಿನ ಮೂಲಕವೇ ಸಿಗುವುದರಿಂದ ತಾಯಿ ಪೋಷಕಾಂಶ ಭರಿತ ಆಹಾರವನ್ನು ಸೇವಿಸುವುದು ಕಡ್ಡಾಯ. ಕೂದಲ ಬೆಳವಣಿಗೆಗೆ ತಾಯಿ ಸೊಪ್ಪು, ಹಣ್ಣು, ಸಿರಿಧಾನ್ಯ ಮತ್ತು ದ್ವಿದಳ ಧಾನ್ಯಗಳನ್ನು ಹೇರಳವಾಗಿ ಸೇವಿಸುವುದು ಬಹಳ ಮುಖ್ಯ.
ನಿತ್ಯ ಮಗುವಿನ ತಲೆಗೆ ತೆಂಗಿನೆಣ್ಣೆ ಅಥವಾ ಎಳ್ಳೆಣ್ಣೆ ಹಾಕಿ ಮಸಾಜ್ ಮಾಡಿ. ಇದರಿಂದ ಕೂದಲು ವೇಗವಾಗಿ ಬೆಳವಣಿಗೆಯಾಗುತ್ತದೆ. ಬೆಚ್ಚಗಿನ ನೀರಿನಿಂದ ಮಗುವಿಗೆ ಸ್ನಾನ ಮಾಡಿಸಿ. ಶ್ಯಾಂಪೂ, ಸೋಪು ಸಾಧ್ಯವಾದಷ್ಟು ದೂರವಿಡಿ. ಕಡಲೆ ಹಿಟ್ಟು ಬಳಸುವುದು ಅತ್ಯುತ್ತಮ.