![](https://kannadadunia.com/wp-content/uploads/2022/08/wind_5c5be7e6ecb08-400x248-1.jpg)
ಮನೆಯಲ್ಲಿ ಗಾಳಿ ಗಂಟೆ ಹಾಕುವುದು ಶುಭಕರ ಎನ್ನುವುದು ಬಹುತೇಕ ಎಲ್ಲರಿಗೂ ಗೊತ್ತು. ಗಾಳಿ ಗಂಟೆಗೆ ವಾಸ್ತು ಶಾಸ್ತ್ರದಲ್ಲಿ ಮಹತ್ವದ ಸ್ಥಾನವಿದೆ. ಯಾವ ಸ್ಥಳದಲ್ಲಿ ಗಾಳಿ ಗಂಟೆಯಿದೆಯೋ ಆ ಸ್ಥಾನದಲ್ಲಿ ಸಕಾರಾತ್ಮಕ ಶಕ್ತಿ ಪ್ರಭಾವ ಹೆಚ್ಚಿರುತ್ತದೆಯಂತೆ.
ಮನೆ ಮತ್ತು ಕಚೇರಿಯಲ್ಲಿ ಗಾಳಿ ಗಂಟೆ ಹಾಕಿದ್ರೆ ಯಶಸ್ಸು ಲಭಿಸುತ್ತದೆ ಎಂಬ ನಂಬಿಕೆಯಿದೆ. ಎಲ್ಲ ಬಣ್ಣದ ಗಾಳಿ ಗಂಟೆಯನ್ನು ಎಲ್ಲ ಕಡೆ ಹಾಕಲು ಸಾಧ್ಯವಿಲ್ಲ. ವಾಸ್ತುಶಾಸ್ತ್ರದ ಪ್ರಕಾರ, ಆಯಾ ಜಾಗಕ್ಕೆ ಸರಿ ಹೊಂದುವ ಬಣ್ಣದ ಗಾಳಿ ಗಂಟೆಯನ್ನು ಹಾಕಬೇಕಾಗುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವ್ಯಾಪಾರದ ವೃದ್ಧಿಗೆ ಹಾಗೂ ವಾಸ್ತು ದೋಷ ನಿವಾರಣೆಗೆ ಗಾಳಿ ಗಂಟೆ ಹಾಕಲು ಬಯಸಿದ್ರೆ, ಕಚೇರಿಯಲ್ಲಿ ಹಳದಿ ಬಣ್ಣದ ಗಾಳಿ ಗಂಟೆಯನ್ನು ಹಾಕಿ. ಇದು ವ್ಯಾಪಾರ, ವ್ಯವಸಾಯದ ವೃದ್ಧಿಗೆ ಕಾರಣವಾಗುತ್ತದೆ.
ವಾಸ್ತು ದೋಷ ನಿವಾರಣೆಗೆ ಮನೆಯಲ್ಲಿ ಬೆಳ್ಳಿ ಬಣ್ಣದ ಗಾಳಿ ಗಂಟೆಯನ್ನು ಹಾಕಬೇಕು. ಇದನ್ನು ದಕ್ಷಿಣ ದಿಕ್ಕಿನಲ್ಲಿ ಹಾಕಬೇಕು.
ವಿದ್ಯಾರ್ಥಿಗಳ ಏಳ್ಗೆಗಾಗಿ ಬಿಳಿ ಬಣ್ಣದ ಗಾಳಿ ಗಂಟೆಯನ್ನು ಹಾಕಬೇಕು. ವಿದ್ಯಾರ್ಥಿಗಳ ಕೋಣೆಯಲ್ಲಿ ಬಿಳಿ ಬಣ್ಣದ ಗಾಳಿ ಗಂಟೆ ಹಾಕಿದ್ರೆ ಇದು ಮಕ್ಕಳ ಸ್ಮರಣ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ.