ಶಾಲೆಗಳು ಮುಚ್ಚಿವೆ. ಮಕ್ಕಳು ಮನೆಯಲ್ಲೇ ಕೂತು, ಫಾಸ್ಟ್ ಫುಡ್ ತಯಾರಿಸಿ ತಿನ್ನುವಷ್ಟು ಜಾಣರಾಗಿದ್ದಾರೆ. ಇದರಿಂದ ಅವರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿರುವುದು ಮಾತ್ರ ಸುಳ್ಳಲ್ಲ.
ಮನೆಯಲ್ಲೇ ಇರುವ ಮಕ್ಕಳು ಟಿವಿ ನೋಡುತ್ತಲೇ ಊಟ ಮಾಡುವುದು ಸಾಮಾನ್ಯ. ಇದನ್ನು ಮೊದಲು ತಪ್ಪಿಸಬೇಕು. ಹೀಗೆ ತಿನ್ನುವಾಗ ಮಕ್ಕಳಿಗೆ ಏನು ಮತ್ತು ಎಷ್ಟು ತಿನ್ನುತ್ತಿದ್ದೇವೆ ಎಂಬ ಮಾಹಿತಿಯೂ ಇರುವುದಿಲ್ಲ. ತಿನ್ನುವಾಗ ತಟ್ಟೆ ಹಾಗೂ ಆಹಾರದ ಕಡೆಗೆ ಗಮನ ಕೊಡುವುದು ಬಹಳ ಮುಖ್ಯ.
ಚಿಪ್ಸ್, ಕುಕ್ಕೀಸ್, ರೆಡಿ ಕೊಲ್ಡ್ ಡ್ರಿಂಕ್ಸ್ ಮೊದಲಾದವನ್ನು ಮನೆಗೆ ತರುವುದನ್ನು ತಪ್ಪಿಸಿ. ಅಧಿಕ ಕ್ಯಾಲೊರಿ ಇರುವ ವಸ್ತುಗಳಿಂದ ಅವರನ್ನು ದೂರವಿಡಿ. ಇದರಿಂದ ತೂಕ ಹೆಚ್ಚುವುದು ಮಾತ್ರವಲ್ಲ ಗ್ಯಾಸ್ಟ್ರಿಕ್ ಸಮಸ್ಯೆಯೂ ಕಾಡುತ್ತದೆ.
ಜಂಕ್ ಫುಡ್ ಬದಲು ಹಣ್ಣು, ತರಕಾರಿ ಧಾನ್ಯಗಳನ್ನು, ಆಕರ್ಷಕ ತಿನಿಸು ಅಥವಾ ಹೊಸ ರುಚಿಗಳ ರೂಪದಲ್ಲಿ ಸವಿಯಲು ಕೊಡಿ. ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಲು ತಿಳಿಸಿ. ನೆನಪಿಡಿ, ಮಕ್ಕಳು ನೀವು ತಿನ್ನುವ ಆಹಾರವನ್ನು ಹಾಗೂ ನಿಮ್ಮ ಪದ್ಧತಿಯನ್ನೇ ಅನುಸರಿಸುತ್ತಾರೆ.