alex Certify ಮಕ್ಕಳ ʼಸ್ಥೂಲಕಾಯʼ ಸಮಸ್ಯೆಗೆ ಇಲ್ಲಿದೆ ಪರಿಹಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳ ʼಸ್ಥೂಲಕಾಯʼ ಸಮಸ್ಯೆಗೆ ಇಲ್ಲಿದೆ ಪರಿಹಾರ

ಬೊಜ್ಜು ಈಗ ಪ್ರತಿಯೊಬ್ಬರನ್ನು ಕಾಡ್ತಾ ಇದೆ. ಈಗಿನ ಜೀವನ ಶೈಲಿಯಿಂದಾಗಿ ಚಿಕ್ಕ ಮಕ್ಕಳು ಕೂಡ ಸ್ಥೂಲಕಾಯದಿಂದ ಬಳಲುತ್ತಿದ್ದಾರೆ. ತಂದೆ-ತಾಯಿ ಮಕ್ಕಳ ಆಹಾರ-ಜೀವನ ಶೈಲಿಯ ಬಗ್ಗೆ ಗಮನ ನೀಡದಿದ್ದಲ್ಲಿ ಈ ಸಮಸ್ಯೆ ದೊಡ್ಡದಾಗುತ್ತದೆ.

ತಂದೆ-ತಾಯಿಗಳ ಜೊತೆಗೆ ಮಕ್ಕಳು ತೂಕ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಬೇಕಾಗುತ್ತದೆ. ಇಲ್ಲವಾದ್ರೆ ಸಾಕಷ್ಟು ಸಮಸ್ಯೆಗಳು ಕಾಡಲು ಶುರುವಾಗುತ್ತವೆ.

ಅತಿಯಾದ ಮೊಬೈಲ್ ಬಳಕೆ, ತುಂಬಾ ಗಂಟೆಗಳ ಕಾಲ ಟಿವಿ ನೋಡುವುದು, ಪೌಷ್ಠಿಕಾಂಶವಿಲ್ಲದ ಆಹಾರ ಸೇವನೆ, ದಣಿವಿಲ್ಲದ ಆಟ ಈ ಸ್ಥೂಲಕಾಯಕ್ಕೆ ಕಾರಣವಾಗುತ್ತದೆ. ಹಾಗಾಗಿ ಪಾಲಕರು ಮಕ್ಕಳಿಗೆ ಹೆಚ್ಚೆಚ್ಚು ಪೌಷ್ಠಿಕ ಆಹಾರ ನೀಡಬೇಕಾಗುತ್ತದೆ. ಬೊಜ್ಜಿಗೆ ಕಾರಣವಾಗುವ ಆಹಾರವನ್ನು ತ್ಯಜಿಸುವಂತೆ ಸಲಹೆ ನೀಡಬೇಕಾಗುತ್ತದೆ.

ಬಾದಾಮಿ : ಮಕ್ಕಳ ಆಹಾರದಲ್ಲಿ ಬಾದಾಮಿಯನ್ನು ಸೇರಿಸಿ. ಈ ಬಾದಾಮಿ ದೇಹಕ್ಕೆ ಪೋಷಕಾಂಶ ನೀಡುವ ಜೊತೆಗೆ ತೂಕ ತಗ್ಗಿಸಲು ನೆರವಾಗುತ್ತದೆ.

ಬೆಳ್ಳುಳ್ಳಿ : ಬೆಳ್ಳುಳ್ಳಿಯನ್ನು ಹಸಿಯಾಗಿ ನೀಡಿದ್ರೆ ಮಕ್ಕಳು ಹೋಗ್ಲಿ ದೊಡ್ಡವರೂ ತಿನ್ನುವುದಿಲ್ಲ. ಹಾಗಾಗಿ ಪಲ್ಯ, ತರಕಾರಿ, ಸಾಂಬಾರ್ ನಲ್ಲಿ ಬೆಳ್ಳುಳ್ಳಿ ಬೆರೆಸಿ ಮಕ್ಕಳಿಗೆ ಕೊಡಿ. ಇದು ಬೊಜ್ಜು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಓಟ್ಸ್ : ಬರಿ ಓಟ್ಸ್ ಬೋರಾದ್ರೆ ಹಣ್ಣು ಹಾಗೂ ಡ್ರೈಫ್ರುಟ್ಸ್ ಮಿಕ್ಸ್ ಮಾಡಿ ಮಕ್ಕಳಿಗೆ ನೀಡಬಹುದು.

ನಿಂಬೆ ಹಣ್ಣಿನ ರಸ : ಪ್ರತಿದಿನ ಬೆಳಿಗ್ಗೆ ಮಕ್ಕಳಿಗೆ ನಿಂಬೆ ರಸ ಸೇವಿಸಲು ನೀಡಿ. ಇದು ದಿನಚರಿಯಾಗಲಿ.

ಬೇಯಿಸಿದ ಮೊಟ್ಟೆ : ಪ್ರತಿದಿನ ಬೆಳಿಗ್ಗೆ ಆಹಾರವಾಗಿ ಮಕ್ಕಳಿಗೆ ಬೇಯಿಸಿದ ಮೊಟ್ಟೆಯನ್ನು ನೀಡಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...