ಜ್ಯೋತಿಷ್ಯ ಶಾಸ್ತ್ರದಲ್ಲಿ ಅನೇಕ ವಿಷ್ಯಗಳ ಬಗ್ಗೆ ಹೇಳಲಾಗಿದೆ. ಅದನ್ನು ಪಾಲಿಸಿದ್ರೆ ಯಶಸ್ಸು ನಿಶ್ಚಿತ ಎನ್ನಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತ್ಯೇಕ ಲೋಹಗಳು ಬೇರೆ ಬೇರೆ ರೀತಿಯ ಪ್ರಭಾವ ಬೀರುತ್ತವೆ. ಚಿನ್ನ, ಬೆಳ್ಳಿ, ಕಂಚು ಸೇರಿದಂತೆ ಬೇರೆ ಬೇರೆ ಲೋಹಗಳ ಧಾರಣೆಯಿಂದ ಬೇರೆ ಬೇರೆ ಲಾಭಗಳು ಪ್ರಾಪ್ತಿಯಾಗುತ್ತವೆ.
ಸ್ತ್ರೀಯರು ಬಂಗಾರ ಪ್ರಿಯರು. ಪ್ರತಿಯೊಬ್ಬ ಮಹಿಳೆ ಕೂಡ ಬಂಗಾರ ಧರಿಸುವುದ್ರಿಂದ ಆಗುವ ಲಾಭವೇನು, ನಷ್ಟವೇನು ಎಂಬುದನ್ನು ತಿಳಿದಿರಬೇಕು. ಜೊತೆಗೆ ಯಾವ ಬೆರಳಿಗೆ ಬಂಗಾರದ ಉಂಗುರ ಧರಿಸಿದ್ರೆ ಶುಭ ಎಂಬುದನ್ನು ಅರಿತಿರಬೇಕು.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗರ್ಭವತಿ ಹಾಗೂ ವೃದ್ಧ ಮಹಿಳೆಯರು ಬಂಗಾರ ಧರಿಸಬಾರದು. ಸ್ವಲ್ಪ ಬಂಗಾರದ ಆಭರಣ ಧರಿಸಿದ್ರೆ ಚಿಂತೆಯಿಲ್ಲ. ಹೆಚ್ಚಿನ ಪ್ರಮಾಣದಲ್ಲಿ ಬಂಗಾರ ಧರಿಸಬಾರದು.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಎಡಗೈಗೆ ಬಂಗಾರದ ಉಂಗುರ ಧರಿಸುವುದು ಲಾಭಕರವಲ್ಲ. ಹಾಗಾಗಿ ಎಡಗೈಗೆ ಬಂಗಾರದ ಉಂಗುರ ಧರಿಸಬಾರದು. ಅನೇಕ ಸಂಕಷ್ಟಗಳು ಎದುರಾಗುವ ಸಾಧ್ಯತೆಯಿರುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವ ಮಹಿಳೆಗೆ ಸಂತಾನ ಪ್ರಾಪ್ತಿಯಾಗಿರುವುದಿಲ್ಲವೋ ಆ ಮಹಿಳೆ ಉಂಗುರ ಬೆರಳಿಗೆ ಬಂಗಾರದ ಉಂಗುರ ಧರಿಸಬೇಕು. ಆಗ ಸಂತಾನ ಪ್ರಾಪ್ತಿಯಾಗಲಿದೆ.