ಕೇಕ್ ಎಂದರೆ ಯಾರಿಗಿಷ್ಟವಿಲ್ಲ ಹೇಳಿ. ಮಕ್ಕಳು ಮನೆಯಲ್ಲಿದ್ದರೆ ಏನಾದರೊಂದು ತಿಂಡಿ ಕೆಳುತ್ತಾ ಇರುತ್ತಾರೆ. ಅವರಿಗೆ ಮಾಡಿಕೊಡಿ ಈ ರುಚಿಕರವಾದ ಲೆಮನ್ ಕೇಕ್.
ಬೇಕಾಗುವ ಸಾಮಗ್ರಿಗಳು:
ಮೈದಾ ಹಿಟ್ಟು – 1 ಕಪ್, ಬೇಕಿಂಗ್ ಸೋಡಾ – 1/4 ಟೀ ಸ್ಪೂನ್, ಬೇಕಿಂಗ್ ಪೌಡರ್ – 1/2 ಟೀ ಸ್ಪೂನ್, ಉಪ್ಪು – 1/4 ಟೀ ಸ್ಪೂನ್, ಸಕ್ಕರೆ – 3/4 ಕಪ್, ಬೆಣ್ಣೆ – 1/4 ಕಪ್, ಮೊಸರು – 1/4 ಕಪ್, ವೆನಿಲ್ಲಾ ಎಸೆನ್ಸ್ – 1/2 ಟೀ ಸ್ಪೂನ್, ಮೊಟ್ಟೆ – 1, ಲಿಂಬೆಹಣ್ಣಿನ ರಸ – 1 ½ ಟೇಬಲ್ ಸ್ಪೂನ್.
ಮಾಡುವ ವಿಧಾನ:
ಮೊದಲಿಗೆ ಒಂದು ಬೌಲ್ ಗೆ ಮೈದಾ ಹಿಟ್ಟು, ಉಪ್ಪು, ಬೇಕಿಂಗ್ ಪೌಡರ್, ಬೇಕಿಂಗ್ ಸೋಡಾ, ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇನ್ನೊಂದು ಬೌಲ್ ಗೆ ಮೊಸರು, ಮೊಟ್ಟೆ, ವೆನಿಲ್ಲಾ ಎಸೆನ್ಸ್ ಲಿಂಬೆಹಣ್ಣಿ ರಸ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
ಇನ್ನೊಂದು ಬೌಲ್ ಗೆ ಬೆಣ್ಣೆ, ಸಕ್ಕರೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಕ್ರೀಂನ ಹದಕ್ಕೆ ಮಾಡಿಕೊಳ್ಳಿ. ಈ ಬೆಣ್ಣೆಯ ಮಿಶ್ರಣಕ್ಕೆ ಮೊಟ್ಟೆಯ ಮಿಶ್ರಣ, ಹಾಗೂ ಮೈದಾ ಮಿಶ್ರಣವನ್ನು ಸ್ವಲ್ಪ ಸ್ವಲ್ಪವೇ ಸೇರಿಸುತ್ತಾ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಕೇಕ್ ನ ಮಿಶ್ರಣದ ಹದಕ್ಕೆ ಬಂದಾಗ ಇದನ್ನು ಕೇಕ್ ಮೌಲ್ಡ್ ಗೆ ಹಾಕಿ ಪ್ರೀ ಹೀಟ್ ಮಾಡಿಕೊಂಡ ಒವನ್ ನಲ್ಲಿ 45 ನಿಮಿಷಗಳ ಕಾಲ ಬೇಯಿಸಿಕೊಂಡರೆ ರುಚಿಕರವಾದ ಲೆಮನ್ ಕೇಕ್ ಸವಿಯಲು ಸಿದ್ಧ.