ಮಕ್ಕಳು ತುಂಬಾ ಇಷ್ಟಪಟ್ಟು ತಿನ್ನುವ ಪದಾರ್ಥಗಳಲ್ಲಿ ಜಾಮ್ ಕೂಡ ಒಂದು. ವೆರೈಟಿ ವೆರೈಟಿ ಜಾಮ್ ತಿನ್ನಲು ಮಕ್ಕಳು ಆಸೆಪಡ್ತಾರೆ. ಎಲ್ಲ ಹಣ್ಣಿನ ಜಾಮ್ ಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಆದ್ರೆ ನೀವು ಮನೆಯಲ್ಲಿ ಅದನ್ನು ಮಾಡಿದ್ರೆ ಆರೋಗ್ಯಕ್ಕೂ ಒಳ್ಳೆಯದು, ಮಕ್ಕಳಿಗೂ ಖುಷಿ. ಮಕ್ಕಳು ಆಸೆಯಿಂದ ತಿನ್ನುವ ಜಾಮ್ ಗಳಲ್ಲಿ ಅನಾನಸ್ ಜಾಮ್ ಕೂಡ ಒಂದು.
ಅನಾನಸ್ ಜಾಮ್ ಮಾಡುವುದು ತುಂಬಾ ಸುಲಭ. ಮನೆಯಲ್ಲಿ ಕಡಿಮೆ ಪದಾರ್ಥಗಳನ್ನು ಬಳಸಿ, ಬಹಳ ಬೇಗ ಅನಾನಸ್ ಜಾಮ್ ತಯಾರಿಸಬಹುದು.
ಅನಾನಸ್ ಜಾಮ್ ಮಾಡಲು ಬೇಕಾಗುವ ಪದಾರ್ಥಗಳು:
1 ಅನಾನಸ್ ಹಣ್ಣು, ಎರಡು ಕಪ್ ಸಕ್ಕರೆ, 1 ಚಮಚ ಕಲರ್, 1 ಚಮಚ ನಿಂಬೆ ರಸ.
ಅನಾನಸ್ ಜಾಮ್ ಮಾಡುವ ವಿಧಾನ:
ಸಣ್ಣ ಸಣ್ಣ ಅನಾನಸ್ ತುಂಡುಗಳನ್ನು ಅರ್ಧ ಕಪ್ ನೀರಿನ ಜೊತೆ ಮಿಕ್ಸಿ ಮಾಡಿಕೊಳ್ಳಿ. ಈ ಮಿಶ್ರಣವನ್ನು ಪ್ಯಾನ್ ಗೆ ಹಾಕಿ ಬಿಸಿ ಮಾಡಿ. 10 ನಿಮಿಷದ ನಂತ್ರ ಸಕ್ಕರೆ, ನಿಂಬೆ ರಸ ಹಾಗೂ ಹಳದಿ ಬಣ್ಣವನ್ನು ಹಾಕಿ ಮಿಕ್ಸ್ ಮಾಡಿ. ಮಿಶ್ರಣ ದಪ್ಪಗಾಗುವವರೆಗೂ ಕೈ ಆಡಿಸುತ್ತಿರಿ. ನಂತ್ರ ಒಲೆ ಆರಿಸಿ. ರುಚಿ ರುಚಿಯಾದ ಅನಾನಸ್ ಜಾಮ್ ರೆಡಿ.